ಮೋದಿಗೆ ಪಿತ್ರೋಡಾ ಸವಾಲ್

ಮೋದಿಗೆ ಪಿತ್ರೋಡಾ ಸವಾಲ್

ಹಿಮಾಚಲ ಪ್ರದೇಶ, ಮೇ. 10,ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ಮೋದಿಗೆ ನನ್ನೊಂದಿಗೆ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್ ನ ಸಾಗರೋತ್ತರ ಅಧ್ಯಕ್ಷ ಸ್ಯಾಂ ಪಿತ್ರೋಡಾ ಅವರು ಸವಾಲ್  ಲೊಂದನ್ನು ಹಾಕಿದ್ದಾರೆ.

2014ರಲ್ಲಿ ನೀವು ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮುನ್ನ ದೇಶದ ಜನತೆಗೆ ಏನಂತ ಭರವಸೆ ನೀಡಿದಿರಾ.? ಅವುಗಳನ್ನೆಲ್ಲ ಈಡೇರಿಸುವಲ್ಲಿ ನಿಮ್ಮ ಸರ್ಕಾರ ವಿಫಲವಾಗಿದೆ. ಈ ಕುರಿತಾಗಿ ಸವಿಸ್ತಾರವಾದ ಚರ್ಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ, ಇಲ್ಲವೇ ನನ್ನ ಜೊತೆಗೆ ಬನ್ನಿ. ನಾನೂ ಗುಜರಾತಿನೇ ಅಂತ ಸವಾಲೆಸೆದಿದ್ದಾರೆ.

ಅಲ್ಲದೇ ಮೋದಿ ಸಾರ್ವಜನಿಕರ ಹಣವನ್ನ ತಮ್ಮ ಪ್ರಚಾರಕ್ಕೆ ಹಾಗೂ ಜಾಹೀರಾತಿಗೆ ಬಳಸಿಕೊಂಡಿದ್ದಾರೆ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಅರ್ಧದಷ್ಟು ಬಜೆಟ್ ನ್ನು ತಮ್ಮ ಹಾಗೂ ತಮ್ಮ ಪಕ್ಷದ ಪ್ರಚಾರಕ್ಕೆ ವಿನಿಯೋಗಿಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos