ತುಂಬಾ ದಪ್ಪವಿರುವವರಿಗೆ ಸಣ್ಣಗಾಗಲು ಆಸೆ.ತುಂಬಾ ಸಣ್ಣಗಿರುವವರಿಗೆ ದಪ್ಪಗಾಗಲು ಆಸೆ. ಹೀಗೆ ಸಣ್ಣಗಿರುವವರು ದಪ್ಪಗಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು ಕೊರಗುತ್ತಾರೆ. ಆದರೆ ಅತೀ ಶೀಘ್ರದಲ್ಲಿ ದಪ್ಪಗಾಗಬೇಕೆಂದು ಜಂಕ್
ಫುಡ್, ಫಾಸ್ಟ್ಫುಡ್ ತಿನ್ನುವುದಲ್ಲ. ಹಾಗೆ ಮಾಡಿದಲ್ಲಿ ದಪ್ಪಗಾಗುವುದು ನಿಜವಾದರೂ ಅನಾರೋಗ್ಯವನ್ನು ಹುಟ್ಟುಹಾಕುತ್ತದೆ. ಅಲ್ಲದೆ ಏಕಾಏಕಿ ದಪ್ಪಗಾಗಲು ಸಾಧ್ಯವೂ ಇಲ್ಲ.ಇದಕ್ಕೆ ಸ್ವಲ್ಪ ಕಾಳಜಿ, ತಾಳ್ಮೆಯೂ ಮುಖ್ಯ. ಸಣ್ಣಗೆ ಇರುವವರಿಗೆ, ದಪ್ಪಗಾಗಬಯಸುವವರಿಗೆ ಇಲ್ಲಿವೆ ಕೆಲವು ಆರೋಗ್ಯಕರ ಸಲಹೆಗಳು: