ಅಕ್ಷಯ ತೃತೀಯ: ಖರೀದಿ ವೇಳೆ ಪಾಲಿಸಬಹುದಾದ ಅಂಶಗಳು

ಅಕ್ಷಯ ತೃತೀಯ: ಖರೀದಿ ವೇಳೆ ಪಾಲಿಸಬಹುದಾದ ಅಂಶಗಳು

ಬೆಂಗಳೂರು, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ಅಕ್ಷಯ ತೃತೀಯ ದಿನ ಚಿನ್ನ, ಆಭರಣ ಖರೀದಿ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿರುತ್ತದೆ ಹೀಗಾಗಿ ಗ್ರಾಹಕರು ಬೆಲೆ ಬಾಳುವ ವಸ್ತುಗಳನ್ನು ಕೊಂಡುಕೊಳ್ಳುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರದಿಂದ ಇರಬೇಕು ಇಲ್ಲವಾದ್ರೆ ಎಲ್ಲ ಮುಗಿದ ಮೇಲೆ ಪಶ್ಚಾತ್ತಾಪ ಪಡುವುದರಿಂದ ಏನು ಪ್ರಯೋಜವಿಲ್ಲ. ಚಿನ್ನ ಖರೀದಿ ಮಾಡುವ ಮುನ್ನ ಅಂದಿನ ಚಿನ್ನದ ಬೆಲೆ ಎಷ್ಟೆಂದು ತಿಳಿದುಕೊಳ್ಳಿ. ಮಜೂರಿ, ವೇಸ್ಟೇಜ್‌, ಎಕ್ಸ್‌ಟ್ರಾ ಚಾರ್ಜಸ್‌ ಬಗ್ಗೆ ಅರಿವಿರಲಿ. ಹಾಲ್‌ಮಾರ್ಕ್‌ ಇರುವ ಚಿನ್ನವನ್ನೇ ಖರೀದಿಸಿ. ಖರೀದಿಸುವ ಮುನ್ನ ಚಿನ್ನದಲ್ಲಿ ಹಾಲ್‌ಮಾರ್ಕ್ಸ್‌, 24 ಕ್ಯಾರೆಟ್​​ ಇದೆಯೇ ಎಂದು ಪರೀಕ್ಷಿಸಿ. ಆಭರಣ ಶುದ್ಧೀಕರಿಸುವಾಗ ಎಚ್ಚರವಹಿಸಿ. ದೊಡ್ಡ ಮೊತ್ತದ ಚಿನ್ನ ಖರೀಸುವಾಗ ಸಾರ್ವಜನಿಕ ವಾಹನದಲ್ಲಿ ಓಡಾಡಬೇಡಿ. ಇದರಿಂದ ನಿಮ್ಮ ಹಣ ಕಳುವಾಗಬಹುದು ಅಥವಾ ವಾಹನದಲ್ಲೇ ಮರೆತು ಹೋಗಬಹುದು. ಆದಷ್ಟೂ ಸ್ವಂತ ವಾಹನ ಬಳಿಸಿ. ಹಿರಿಯರನ್ನು ಅಥವಾ ಚಿನ್ನ ಖರೀದಿ ಬಗ್ಗೆ ತಿಳಿದಿರುವ ಸಂಬಂಧಿಕರು ಅಥವಾ ಸ್ನೇಹಿತರನ್ನು ಕರೆದುಕೊಂಡು ಹೋಗಿ. ಆನ್‌ಲೈನ್‌ನಲ್ಲಿ ಚಿನ್ನ ಖರೀದಿ ಮಾಡುವಾಗ ಎಚ್ಚರ ವಹಿಸಿ. ಆಭರಣದ ಡಿಸೈನ್‌ ಅನ್ನು ಸಂಪೂರ್ಣವಾಗಿ ಪರೀಕ್ಷಿಸಿ. ಮನಸ್ಸಿಗೆ ಇಷ್ಟವಾದ ಆಭರಣವನ್ನು ಆಯ್ಕೆ ಮಾಡಿ. ಅಲ್ಲಿರುವ ಷರತ್ತು ಮತ್ತು ನಿಬಂಧನೆಗಳನ್ನು ಸರಿಯಾಗಿ ಓದಿಕೊಳ್ಳಿ. ಆಭರಣ ಖರೀದಿಸುವ ಮುನ್ನ ಅಂಗಡಿಯ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಉತ್ತಮ. ಗುಣಮಟ್ಟದ ಸೇವೆ ಒದಗಿಸುವ ಆಭರಣ ಮಳಿಗೆಗೆ ಮೊದಲು ಆದ್ಯತೆ ನೀಡಿ. ಇದರಿಂದ ನಿಮ್ಮ ಆಭರಣಕ್ಕೆ ಸರಿಯಾದ ಬೆಲೆ ಸಿಗಬಹುದು. ನಗದು ಹಣಕ್ಕಿಂತ ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಉಪಯೋಗಿಸಿ. ಇದರಿಂದ ದೊಡ್ಡ ಮೊತ್ತದ ಹಣ ಕೊಂಡೊಯ್ಯುವ ತಲೆಬಿಸಿ ದೂರವಾಗುತ್ತದೆ. ಹಣವನ್ನು ಎಣಿಸುವ ಕಷ್ಟ ತಪ್ಪುತ್ತದೆ ಹಾಗೂ ನೀವು ಎಷ್ಟು ಮೊತ್ತದ ಚಿನ್ನ ಖರೀದಿಸಿದಿರಿ ಎಷ್ಟು ಹಣ ಡ್ರಾ ಆಗಿದೆ ಎಂದು ತಕ್ಷಣವೇ ಬ್ಯಾಂಕ್‌ನ ಮೇಸೆಜ್‌ ಮೂಲಕ ತಿಳಿದುಕೊಳ್ಳಬಹುದು. ಹೌದು ಸಾಮಾನ್ಯವಾಗಿ ಪ್ರಯೋಗ ಮಾಡುವುದಕ್ಕೆ ಇದು ಸರಿಯಾದ ಸಮಯವಲ್ಲ ಅದಷ್ಟು ಖರೀದಿ ಮಾಡುವ ಮುನ್ನ ನಿಮಗೆ ಗೊತ್ತಿರುವ, ನಂಬಿಕೆ ಇರುವ ಮಳಿಗೆಗೆಯಲ್ಲಿ ಬೆಲೆಬಾಳುವ ವಸ್ತು ಕೊಂಡುಕೊಂಡರೇ ಒಳಿತು.

ಫ್ರೆಶ್ ನ್ಯೂಸ್

Latest Posts

Featured Videos