ನವದೆಹಲಿ, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ನನ್ನ ತಂದೆ ದಿವಂಗತ ರಾಜೀವ್ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿಯವರು ತೆಗಳಿದರೂ ಸಹ ನನಗೆ ಮೋದಿಯವರ ಮೇಲೆ ಪ್ರೀತಿ ಇನ್ನು ಇದೆ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ದೆಹಲಿಯ ಚಾಂದನಿ ಚೌಕ್ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್, ನರೇಂದ್ರ ಮೋದಿ ನನ್ನ ಕುಟುಂಬದ ಬಗ್ಗೆ ಎಷ್ಟು ಹಗೆತನ ಹೊಂದಿದ್ದಾರೆ. ಆದರೆ ನಾನು ಅವರ ಬಗ್ಗೆ ಕೇವಲ ಪ್ರೀತಿಯನ್ನಷ್ಟೇ ಹೊಂದಿದ್ದೇನೆ. ಅವರು ನನ್ನ ತಂದೆ ಹುತಾತ್ಮ ರಾಜೀವ್ ಗಾಂಧಿಯವರನ್ನು ಅವಮಾನಿಸಿದ್ದಾರೆ. ಆದರೂ ನಾನವರನ್ನು ಪ್ರೀತಿಸುತ್ತೇನೆ ಎಂದು ಹೇಳಿದರು. ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಿಮ್ಮ ತಂದೆಯ ಜೀವನ ನಂಬರ್ 1 ಭ್ರಷ್ಟಾಚಾರಿಯಾಗಿಯೇ ಅಂತ್ಯವಾಯ್ತು ಅಂತಾ ಹೇಳಿದ್ದರು.