ಡಿಸ್ಪುರ್, ಮೇ. 3, ನ್ಯೂಸ್ ಎಕ್ಸ್ ಪ್ರೆಸ್: ಅಸ್ಸಾಂನ ಹೊಜೈ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ 2 ಮಹಿಳೆಯರ 49,98,000 ರೂ. ಹಣ ಪತ್ತೆಯಾಗಿದ್ದು. ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
2 ಮಹಿಳೆಯರು ಯುಪಿ ಡಿಮಾಪುರ್ ಬಿಜಿ ಎಕ್ಸ್ ಪ್ರೆಸ್ ರೈಲು ಮೂಲಕ ಪ್ರಯಾಣಿಸುತ್ತಿದ್ದರು. ಮೋಹನ್ ಹಾಲ್ಡರ್ ಪತ್ನಿ ಗಾಯತ್ರಿ ಹಾಲ್ಡರ್ (60) ಮತ್ತು ಜಂತು ಹಾಲ್ಡರ್ ಪತ್ನಿ ಆರತಿ ಹಾಲ್ಡರ್ (55) ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಇಬ್ಬರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯರು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಫ್ಯಾಸಿಟೋಲಾ ಗ್ರಾಮದವರು ಎಂದು ತಿಳಿದುಬಂದಿದ್ದು, ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.