‘ಬೊಮ್ಮರಿಲ್ಲು’ನಲ್ಲಿ ಅಕ್ಕಿನೇನಿ ಅಖಿಲ್ ನಾಯಕಿಯಾಗಿ ರಶ್ಮಿಕಾ

  • In Cinema
  • April 25, 2019
  • 366 Views
‘ಬೊಮ್ಮರಿಲ್ಲು’ನಲ್ಲಿ ಅಕ್ಕಿನೇನಿ ಅಖಿಲ್ ನಾಯಕಿಯಾಗಿ ರಶ್ಮಿಕಾ

ಹೈದರಾಬಾದ್, ಏ. 25, ನ್ಯೂಸ್ ಎಕ್ಸ್ ಪ್ರೆಸ್: ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಜೊತೆ ದೇವದಾಸ್ ಸಿನಿಮಾ ಮಾಡಿದ್ದ ರಶ್ಮಿಕಾ ಮಂದಣ್ಣ, ಈಗ ಅವರ ಮಗನ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ. ಹೌದು, ನಾಗಾರ್ಜುನ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ಮುಂದಿನ ಸಿನಿಮಾಗೆ ರಶ್ಮಿಕಾ ಅವರನ್ನ ಕರೆತರುವ ಪ್ರಯತ್ನ ಸಾಗಿದೆಯಂತೆ. ರಶ್ಮಿಕಾ ಬಗ್ಗೆ ತೆಲುಗು ದೇಶದಿಂದ ಬಂತು ಎರಡು ಸುದ್ದಿ.! ನಿಜಾನಾ, ಸುಳ್ಳಾ..? ‘ಬೊಮ್ಮರಿಲ್ಲು’ ಬಾಸ್ಕರ್ ಚಿತ್ರದಲ್ಲಿ ಅಖಿಲ್-ರಶ್ಮಿಕಾ ಬೊಮ್ಮರಿಲ್ಲು, ಆರೆಂಜ್, ಪರಗು, ಬೆಂಗಳೂರು ನಾಟಕಳ್ ಅಂತಹ ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕ ಬಾಸ್ಕರ್ ಅವರ ಮುಂದಿನ ಸಿನಿಮಾದಲ್ಲಿ ಅಖಿಲ್ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ರಶ್ಮಿಕಾ ಅವರನ್ನ ಸಂಪರ್ಕ ಮಾಡಲಾಗಿದೆಯಂತೆ. ಆದ್ರೆ, ಅಧಿಕೃತವಾಗಿ ಅಂತಿಮವಾಗಿಲ್ಲ ಎಂದು ಹೇಳಲಾಗ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos