ನವದೆಹಲಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ನೋಟಿಸ್ ಕುರಿತ ವಿಚಾರಣೆ ಏಪ್ರಿಲ್ 30 ರಂದು ನಡೆಯಲಿದೆ. ಸುಪ್ರೀಂ ನಿಂದ ನೋಟಿಸ್ ರಫೇಲ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅಪರಾಧಿ’ ಎಂದು ಕರೆದ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಬೆಳಿಗ್ಗೆ ನೋಟಿಸ್ ನೀಡಿದೆ. ಬಿಜೆಪಿಯ ಮೀನಾಕ್ಷಿ ಲೇಖಿ ರಾಹುಲ್ ವಿರುದ್ಧ ಸುಪ್ರೀಂ ಮೊರೆ ಹೋಗಿದ್ದರು. ಇದರ ವಿಚಾರಣೆ ಏಪ್ರಿಲ್ 30 ರಂದು ನಡೆಯಲಿದೆ. ಈಗಾಗಲೇ ರಫೇಲ್ ಡೀಲ್ ತೀರ್ಪಿನ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ರಾಹುಲ್ ಗಾಂಧಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ವಯನಾಡಿನಲ್ಲಿ ದೂರು ದಾಖಲಾಗಿತ್ತು. ಮತದಾನದ ದಿನೇ ಮತದಾರರ ಬಳಿ ಕಾಂಗ್ರೆಸ್ಸಿಗೇ ಮತನೀಡಿ ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರಿ, ಎನ್‌ಡಿಎದ ಅಭ್ಯರ್ಥಿ ತುಷಾರ್ ವೆಲ್ಲಪಲ್ಲಿ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದ್ದರು. ಇವೆರಡೂ ಸಾಲದೆಂಬಂತೆ, 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕವಾಗಿ ಮಾತನಾಡಿದ್ದ ರಾಹುಲ್ ವಿರುದ್ಧ ದೂರು ದಾಖಲಿಸಲಾಗಿದೆ. 2016 ರ ಅಕ್ಟೋಬರ್ 6 ರಂದು ಉತ್ತರ ಪ್ರದೇಶದಲ್ಲಿ ಕಿಸಾನ್ ಯಾತ್ರಾ ಎಂಬ ಸಮಾವೇಷವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, “ನೀವು(ಮೋದಿ) ಜಮ್ಮು ಕಾಶ್ಮೀರದ ಸೈನಿಕರ ರಕ್ತದ ಹಿಂದೆ ಅಡಗಿಕುಳಿತಿದ್ದೀರಿ. ಭಾರತಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಅವರ ಬಲಿದಾನಕ್ಕೂ ನೀವು ಬೆಲೆ ಕೊಡುತ್ತಿಲ್ಲ. ಅವರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಾ. ಇದು ತಪ್ಪು” ಎಂಬ ಹೇಳಿಕೆ ನೀಡಿದ್ದರು. ಈ ದೂರನ್ನು ಮುಂಚೆಯೇ ದಾಖಲಿಸಲಾಗಿತ್ತಾದರೂ, ದೆಹಲಿ ನ್ಯಾಯಾಲಯ ಅದನ್ನು ತನ್ನ ಸುಪರ್ಧಿಗೆ ತೆಗೆದುಕೊಳ್ಳದೆ ಇದೀಗ ಲೋಕಸಭೆ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿ ಈ ಪ್ರಕರಣವನ್ನು ಸಂಸದರ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ. ರಾಹುಲ್ ಗಾಂಧಿ ವಿರುದ್ಧ ಬಿತ್ತು ಮತ್ತೊಂದು ಕಂಪ್ಲೇಂಟ್, ಈ ಬಾರಿ ವಯನಾಡಿನಲ್ಲಿ! ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಈ ಪ್ರಕರಣವನ್ನು ನ್ಯಾಯಾಲಯವು ಸಂಸದರ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ. ಇದರ ವಿಚಾರಣೆ ಏಪ್ರಿಲ್ 26 ರಂದು ನಡೆಯಲಿದೆ.