ಲಂಡನ್‍ ನಿಂದ ಬಂದು ಮತ ಚಲಾಯಿಸಿದ ರೆಡ್ಡಿ ಪುತ್ರ ಗಾಲಿ ಕಿರೀಟಿ

ಲಂಡನ್‍ ನಿಂದ ಬಂದು ಮತ ಚಲಾಯಿಸಿದ ರೆಡ್ಡಿ ಪುತ್ರ ಗಾಲಿ ಕಿರೀಟಿ

ಬಳ್ಳಾರಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್ : ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತದಾನದಿಂದ ವಂಚಿತರಾಗಿದ್ದಾರೆ. ಆದ್ರೆ ಅವರ ಪತ್ನಿ ಅರುಣಾ ಮಕ್ಕಳಾದ ಕಿರೀಟಿ, ಮಗಳು ಬ್ರಹ್ಮಿಣಿ ಅವಂಬಾವಿ ನಗರದ ಮತಗಟ್ಟೆ ಸಂಖ್ಯೆ 5 ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಶೇಷ ಅಂದ್ರೆ ರೆಡ್ಡಿ ಪುತ್ರ ಕಿರೀಟಿ ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದು, ಇದಕ್ಕಾಗಿ ಲಂಡನ್‍ ನಿಂದ ಬಂದಿದ್ದಾರೆ. ಮತದಾನ ಬಳಿಕ ಮಾತನಾಡಿದ ಕಿರೀಟಿ ಫಸ್ಟ್ ಟೈಂ ಮತ ಹಾಕ್ತಿರೋದಕ್ಕೆ ಖುಷಿಯಾಗಿದೆ. ಮತದಾನ ಪ್ರತಿಯೊಬ್ಬರ ಕರ್ತವ್ಯ. ಹೀಗಾಗಿ ಎಲ್ಲರೂ ಮತ ಹಾಕುವಂತೆ ಮನವಿ ಮಾಡಿದ್ರು. ಲಂಡನ್‍ ನಲ್ಲಿ ಪೊಲಿಟಿಕಲ್ ಸೈನ್ಸ್ ಓದುತ್ತಿರುವ ಕಿರೀಟಿಗೆ ರಾಜಕೀಯಕ್ಕೆ ಬರುವ ಆಸಕ್ತಿ ಇಲ್ಲವಂತೆ, ಆದ್ರೆ ಸಮಾಜ ಸೇವೆ ಮಾಡುವ ಆಸೆ ಇದೆ. ಜೊತೆಗೆ ಒಳ್ಳೆಯ ನಟನಾಗಬೇಕೆಂದುಕೊಂಡಿದ್ದೇನೆ ಅಂತಾ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos