ಎಸ್ಎಸ್ ಬಿ ನೇಮಕಾತಿ

ಎಸ್ಎಸ್ ಬಿ ನೇಮಕಾತಿ

ಬೆಂಗಳೂರು, . 23, ನ್ಯೂಸ್ ಎಕ್ಸ್ ಪ್ರೆಸ್:  ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ) ನೇಮಕಾತಿ 63 ಸಬ್‌ ಇನ್ಸ್‌ಸ್ಟೆಕ್ಟರ್ ಹುದ್ದೆಗಳನ್ನು ಎಲ್ ಡಿಸಿಇ ಪರೀಕ್ಷೆಯ ಮೂಲಕ ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಅಧಿಸೂಚನೆಯನ್ನು ಓದಿಕೊಂಡ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮೇ 18,2019 ರೊಳಗೆ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕಿರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ: ಸಬ್‌ ಇನ್ಸ್‌ಸ್ಟೆಕ್ಟರ್ ಹುದ್ದೆಯು ಒಂದು ಪ್ರಮೋಷನ್ ಪಡೆಯುವ ಹುದ್ದೆಯಾಗಿದ್ದು, ಎಎಸ್ ಐ ಹುದ್ದೆಯಲ್ಲಿರುವ ಅಭ್ಯರ್ಥಿಗಳು ಎಲ್ ಡಿಸಿಇ ಸ್ಪರ್ಧಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ವಯೋಮಿತಿ: ಅರ್ಜಿದಾರರಿಗೆ ಯಾವುದೇ ವಯೋಮಿತಿಯನ್ನು ನಿಗದಿಪಡಿಸಿರುವುದಿಲ್ಲ

ವೇತನದ ವಿವರ: ಎಸ್ಎಸ್ ಬಿಯ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಪರೀಕ್ಷೆಯ ವಿವರವನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.

ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ

ಅರ್ಜಿ ಸಲ್ಲಿಸುವುದು :ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಎಸ್ಎಸ್ ಬಿಯ ಅಧಿಕೃತಗೆ ಅಧಿಸೂಚನೆಯನ್ನು ಓದಿಕೊಂಡ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕ ಮೇ 18,2019 ರೊಳಗೆ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕಿರುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos