ಕೊಪ್ಪಳ, ಏ. 20, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿದು, ಎರಡನೇ ಹಂತದ ಮತದಾನಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಈ ಮಧ್ಯೆ ಚುನಾವಣೆಯಲ್ಲಿ ಸೋಲುವ ಭಯದಿಂದ ಏನೇನೋ ಮಾತನಾಡ್ತವೆ ಅಂತಾ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಆತ್ಮ ಕೊಪ್ಪಳದಲ್ಲಿದೆ ಎಂಬ ಸಂತೋಷ್ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದು, ನನ್ನ ಆತ್ಮ ಎಲ್ಲಾ ಕಡೆ ಇದೆ. ನನ್ನ ಆತ್ಮ ಹೃದಯದಲ್ಲಿದೆ. ಎಲ್ಲಾ ಕಡೆ ಆತ್ಮ ಇರೋಕೆ ನಾನೇನು ದೇವರಲ್ಲ ಅಂತಾ ತಿರುಗೇಟು ನೀಡಿದ್ರು. ಇದೇ ವೇಳೆ ಹತ್ತು ಕೆ.ಜಿ.ಅಕ್ಕಿ ಹೇಗೆ ಕೊಡ್ತಾರೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೂ ಪ್ರತಿಕ್ರಿಯಿಸಿದ ಸಿದ್ದು, ಏಳು ಕೆ.ಜಿ. ಅಕ್ಕಿ ಕೊಡುವವರಿಗೆ ಹತ್ತು ಕೆ.ಜಿ.ಅಕ್ಕಿ ಕೊಡೋಕಾಗಲ್ವ ಅಂತಾ ಪ್ರಶ್ನಿಸಿದ್ರು. ಅಲ್ಲದೆ ಪೆದ್ದು ಪೆದ್ದಾಗಿ ಮಾತನಾಡೋ ಶೋಭಾ ಕರಂದ್ಲಾಜೆ, ಈಶ್ವರಪ್ಪ ಹೇಳಿಕೆಗೆ ಉತ್ತರ ಕೊಡಲಾಗಲ್ಲ ಅಂತಾ ಹೇಳಿದ್ರು. ಬಿಜೆಪಿ ಕಡೆ ಬೆರಳು ತೋರಿಸಿದ್ರೆ ಕೈ ಕಟ್ ಮಾಡ್ತೀವಿ ಅಂತಾ ಹೇಳಿದ್ದ ಕೇಂದ್ರ ಸಚಿವ ಮನೋಜ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ಅವರು ರಾಕ್ಷಸ ಗುಣದವರು ಅಂತಾ ಹರಿಹಾಯ್ದರು. ಇದೇ ವೇಳೆ ಚುನಾವಣೆಯಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ ಅಷ್ಟೇ, ಡಬಲ್ ದಾಟಲ್ಲ ಅಂತಾ ಹೇಳಿದ್ದಾರೆ.