ದುಬೈ, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಪಾಠಶಾಲೆ, ದುಬಾಯಿ ಯುಎಇಯು ಕನ್ನಡ ಪರಿಣಿತಿ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ಏ.26ರಂದು ಅಲ್ ಸಫಾ ದುಬೈನ ಜೆಎಸ್ಎಸ್ ಪ್ರೈವೇಟ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದೆ.
ಕರ್ನಾಟಕ ಪುಸ್ತಕ ಮನೆಯ ಅಂಕೇ ಗೌಡ, ನಾಗರಾಜ್ ಅವರನ್ನು ಸನ್ಮಾನಿಸಲಾಗುತ್ತಿದೆ. ವಿಶೇಷ ಅತಿಥಿಯಾಗಿ ನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ. ಫಾರ್ಚೂನ್ ಗ್ರೂಪ್ ಮುಖ್ಯಸ್ಥ ಪ್ರವೀಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.