ಮುಂಬೈ, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ಚಿತ್ರರಂಗದ ನಟಿ ತನ್ನ ಆರಂಭದ ದಿನಗಳಲ್ಲಿ ತಾವು ಅನುಭವಿಸಿದ ಕರಾಳ ದಿನಗಳನ್ನು ತೆರೆದಿಟ್ಟಿದ್ದಾರೆ.
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ ಬಳಿಕ ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಿಚಾ ಭದ್ರ, ತಾವು ಚಿತ್ರರಂಗದಲ್ಲಿ ಅವಕಾಶ ಕೋರಿ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಭೇಟಿ ಮಾಡಿದ್ದ ವೇಳೆ, ಇಬ್ಬರು ತಮ್ಮನ್ನು ಸಂತೋಷಪಡಿಸಿದರೆ ಕೆಲಸ ನೀಡುವುದಾಗಿ ನೇರವಾಗಿಯೇ ತಿಳಿಸಿದ್ದರು ಎಂದು ಹೇಳಿದ್ದಾರೆ.
ಈಗ ಕಿರುತೆರೆಯಲ್ಲಿ ಬೇಡಿಕೆಯ ನಟಿಯಾಗಿರುವ ರಿಚಾ, ಚಿತ್ರರಂಗದಲ್ಲಿ ಅವಕಾಶ ಗಳಿಸುವ ಸಲುವಾಗಿಯೇ ಹೆಸರನ್ನು ಹಾಳು ಮಾಡಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಅವರುಗಳ ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದಿದ್ದಾರೆ. ನನ್ನ ಕುಟುಂಬ ನನ್ನ ಮೇಲೆ ಸಾಕಷ್ಟು ಕಾಳಜಿ ಹೊಂದಿರುವುದರಿಂದ ಮಿತಿಯನ್ನು ದಾಟಲು ನಾನು ಇಚ್ಛಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.