ಬೆಂಗಳೂರು, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿಯ ಹಲವು ನಾಯಕರು ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದ್ದಾರೆ ಈ ಚುನಾವಣೆಯನ್ನು ಕಟ್ಟಕಡೆಯ ಚುನಾವಣೆ ಮಾಡಿ ಸಂವಿಧಾನ ಬದಲಾವಣೆ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದಂತೆ ಎಂದು ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹರಿ ಪ್ರಸಾದ್ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ,ಇಂದು ಹೆಚ್ ಎಸ್ ಆರ್ ಲೇಔಟ್,ಆಗ್ರ,ಬೊಮ್ಮನಹಳ್ಳಿ ಸೇರಿದಂತೆ ಹಲವು ಕಡೆ ಪ್ರಚಾರದ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬೆಂ.ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಹರಿಪ್ರಸಾದ್ ಬಿಜೆಪಿಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು ನಾವು ಬಿಜೆಪಿಯ ಅಭ್ಯರ್ಥಿ ವಿರುದ್ಧ ಅಲ್ಲ ಬಿಜೆಪಿ ವಿರುದ್ಧ ನಮ್ಮ ಪ್ರಚಾರ ಬಿಜೆಪಿಯ ಹಲವು ನಾಯಕರು ಸಂವಿಧಾನವನ್ನು ಬದಲಾವಣೆ ಮಾಡಿ ಈ ಚುನಾವಣೆಯನ್ನು ಕಟ್ಟಕಡೆಯ ಚುನಾವಣೆ ಮಾಡಲು ಹೊರಟಿದ್ದಾರೆ ಸಂವಿಧಾನವನ್ನು ರಕ್ಷಿಸಿ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ನಾವು ಮತವನ್ನು ಕೇಳುತ್ತಿದ್ದೇವೆ. ಬೆಂ.ದಕ್ಷಿಣದ ಸರ್ವತೋಮುಖ ಅಭಿವೃದ್ಧಿಗೆ ಜನಸಾಮಾನ್ಯರು ಮತ ಹಾಕುತ್ತಾರೆ ಅನ್ನುವ ನಂಬಿಕೆ ಇದೆ ಬಿಜೆಪಿಯವರು ರಾಮಮಂದಿರ ವಿಷಯವಾಗಿ ಹಳೆಯ ಪುರಾಣ ಶುರು ಮಾಡಿದ್ದಾರೆ ರಾಮ ಮಂದಿರ ಒಂದನ್ನೇ ಚುನಾವಣೆಯ ಅಸ್ತ್ರ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ.ರೈತರ,ಕಾರ್ಮಿಕರ,ದುರ್ಬಲರ ಹಾಗು ಮಹಿಳೆಯರ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಇರುವ ಪಕ್ಷ ಬಿಜೆಪಿ ಪಕ್ಷ ಎಂದು ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.