ಗೋಮಾಂಸ ವ್ಯಾಪಾರಿಯನ್ನು ಥಳಿಸಿ, ಹಂದಿ ಮಾಂಸ ತಿನ್ನಲು ಒತ್ತಾಯ…

ಗೋಮಾಂಸ ವ್ಯಾಪಾರಿಯನ್ನು ಥಳಿಸಿ, ಹಂದಿ ಮಾಂಸ ತಿನ್ನಲು ಒತ್ತಾಯ…

ಗುವಾಹಟಿ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ವಾರದ ಸಂತೆಯಲ್ಲಿ ದನದ ಮಾಂಸ ಮಾರುತ್ತಿರುವಾಗ ಶೌಕತ್​ನನ್ನು ಗುರುತಿಸಿದ ಯುವಕರು ಆತನನ್ನು ನಡುಬೀದಿಯಲ್ಲಿ ಮಂಡಿಯೂರಿಸಿ ಹೊಡೆದರು ಎಂದು ತಿಳಿದುಬಂದಿದೆ. ಗೋಮಾಂಸ ವ್ಯಾಪಾರಿ ವಿರುದ್ಧ ತಿರುಗಿಬಿದ್ದ ಯುವಕರ ಗುಂಪೊಂದು ಆತನನ್ನು ನಡು ಬೀದಿಯಲ್ಲಿ ಥಳಿಸಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ. ಶೌಕತ್​ ಅಲಿ (68) ಥಳಿತಕ್ಕೊಳಗಾದ ವ್ಯಕ್ತಿ. ಬಿಸ್ವಂತ್​ ಚರಿಯಲ್ ನಗರದಲ್ಲಿ ಹೋಟೆಲ್​ವೊಂದನ್ನು ನಡೆಸುತ್ತಿದ್ದ ಅವರನ್ನು ಹಿಡಿದು ನಡುಬೀದಿಗೆ ತಂದ ಆಕ್ರೋಶಿತರ ಗುಂಪು ಹಿಗ್ಗಾ ಮುಗ್ಗ ಥಳಿಸಿದ್ದಾರೆ. ವಾರದ ಸಂತೆಯಲ್ಲಿ ದನದ ಮಾಂಸ ಮಾರುತ್ತಿರುವಾಗ ಶೌಕತ್​ನನ್ನು ಗುರುತಿಸಿದ ಯುವಕರು ಆತನನ್ನು ನಡುಬೀದಿಯಲ್ಲಿ ಮಂಡಿಯೂರಿಸಿ ಹೊಡೆದರು ಎಂದು ತಿಳಿದುಬಂದಿದೆ. ಅಲ್ಲದೇ ಶೌಕತ್​ಗೆ ಬಲವಂತವಾಗಿ ಹಂದಿ ಮಾಂಸ ತಿನ್ನಿಸುವ ವಿಫಲ ಯತ್ನ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಗುಂಪನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos