ಮುಂಬೈ, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ನ ಯಶಸ್ವಿ ನಟ ಎಂದೇ ಕರೆಸಿಕೊಳ್ಳುವ ರಣ್ವೀರ್ ಇದೀಗ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ’83’ ಅನ್ನುವ ಚಿತ್ರದಲ್ಲಿ ರಣ್ವೀರ್ ಬಣ್ಣ ಹಚ್ಚಲಿದ್ದಾರೆ. 83 ಚಿತ್ರವು ಖ್ಯಾತ ಕ್ರಿಕೆಟರ್ ಕಪಿಲ್ ದೇವ್ ಜೀವನ ಚರಿತ್ರೆಯ ಕುರಿತ ಚಿತ್ರವಾಗಿದೆ. ಇನ್ನೂ ಕ್ರಿಕೆಟ್ ಲೋಕದ ದಿಗ್ಗಜ ಕಪಿಲ್ ದೇವ್ ವಿಶ್ವಕಪ್ ಗೆದ್ದುದು 1983 ಇಸವಿಯಲ್ಲಿ. ಅದೇ ಕಾರಣದಿಂದ ಈ ಚಿತ್ರಕ್ಕೆ ’83’ ಎಂದು ಹೆಸರಿಡಲಾಗಿದೆ.
ಪ್ರಸ್ತುತ 83 ಚಿತ್ರದಲ್ಲಿ ರಣ್ವೀರ್ ಅವರಿಗೆ ಜೋಡಿಯಾಗಿ ಮಿಸ್ ವರ್ಲ್ಡ್ ಖ್ಯಾತಿಯ ಮಾನುಷಿ ಚಿಲ್ಲರ್ ಅಭಿನಯಿಸಲಿದ್ದಾರೆ. ನಟನೆಯ ಮೂಲಕ ಸಿನಿ ಪ್ರಿಯರ ಮನ ಸೆಳೆಯಲು ಬರಲಿದ್ದಾರೆ ಮಾನುಷಿ. ಯಶ್ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮನೀಶ್ ಶರ್ಮಾ ನಿರ್ದೇಶನದಲ್ಲಿ ಮೂಡಿ ಬರಲಿರುವ 83 ಚಿತ್ರಕ್ಕೆ ನಾಯಕಿಯಾಗಿ ಮನುಷಿ ಚಿಲ್ಲಾರ್ ಆಯ್ಕೆಯಾಗಿರುವುದು ಬಾಲಿವುಡ್ ಬೆಡಗಿಯರ ಹೊಟ್ಟೆ ಉರಿಸದೇ ಇರದು.