ಬೆಂಗಳೂರಿನ ಜನ ಈ ಬಾರಿ ನಮ್ಮ ಕೈ ಬಿಡುವುದಿಲ್ಲ: ದಿನೇಶ್

ಬೆಂಗಳೂರಿನ ಜನ ಈ ಬಾರಿ ನಮ್ಮ ಕೈ ಬಿಡುವುದಿಲ್ಲ: ದಿನೇಶ್

ಬೆಂಗಳೂರು, . 5, ನ್ಯೂಸ್ ಎಕ್ಸ್ ಪ್ರೆಸ್: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಬೆಂಗಳೂರಿನ ಜನ ಈ ಬಾರಿ ನಮ್ಮ ಕೈ ಬಿಡುವುದಿಲ್ಲ. ಬೆಂಗಳೂರಿನ 3 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ. ನಾವು ಎಲ್ಲ ಸಮುದಾಯ- ಧರ್ಮವನ್ನ ಸಮಾನವಾಗಿ ನೋಡುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನ 3 ಕ್ಷೇತ್ರದಲ್ಲೂ ಬೇರೆ ಬೇರೆ ಸಮುದಾಯದ ಅಭ್ಯರ್ಥಿಗಳಿದ್ದಾರೆ. ಉತ್ತರದಲ್ಲಿ ಕೃಷ್ಣ ಭೈರೇಗೌಡ ಒಕ್ಕಲಿಗ ಸಮುದಾಯದವರು. ದಕ್ಷಿಣದಲ್ಲಿ ಬಿ.ಕೆ. ಹರಿಪ್ರಸಾದ್ ಹಿಂದುಳಿದ ಜನಾಂಗಕ್ಕೆ ಸೇರಿದವರು. ಸೆಂಟ್ರಲ್ ಕ್ಷೇತ್ರದಲ್ಲಿ ರಿಜ್ವಾನ್ ಅರ್ಷದ್ ಅಲ್ಪಸಂಖ್ಯಾತ ಸಮುದಾಯವರು. ಈ 3 ಅಭ್ಯರ್ಥಿಗಳೂ ಗೆಲ್ಲಲ್ಲಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಬೆಂಗಳೂರಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಮೈತ್ರಿ ಸರ್ಕಾರದಲ್ಲೂ ಬೆಂಗಳೂರಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos