ನವದೆಹಲಿ, ಏ. 4, ನ್ಯೂಸ್ ಎಕ್ಸ್ ಪ್ರೆಸ್: ಶೇ.0.25 ರೆಪೋ ದರ ಇಳಿಕೆ ಮಾಡಿದ ಆರ್ಬಿಐ; ಕಡಿಮೆಯಾಗಲಿದೆ ಗೃಹ-ವಾಹನ ಸಾಲಗಳ ಮೇಲಿನ ಬಡ್ಡಿ ದರ ಫೆಬ್ರವರಿಯಲ್ಲಿ ರೆಪೋ ದರ ಇಳಿಕೆಯ ಬೆನ್ನಲ್ಲಿ ಕೆಲವು ಬ್ಯಾಂಕುಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಸ್ವಲ್ಪ ಇಳಿಕೆ ಮಾಡಿವೆ. ಈಗ ಮತ್ತೆ ರೆಪೋ ದರ ಕಡಿತವಾಗಿರುವುದಿರಿಂದ ಬಡ್ಡಿ ದರ ಮತ್ತಷ್ಟು ಕಡಿತವಾಗಲಿದೆ. ಬ್ಯಾಂಕುಗಳಲ್ಲಿ ಸಾಲ ಮಾಡಿದವರಿಗೆ ಇದರಿಂದ ಅನುಕೂಲವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿ ಗುರುವಾರ ರೆಪೋ ದರವನ್ನು 25 ಬೇಸ್ ಪಾಯಿಂಟ್ ಅಥವಾ ಶೇ. 025ನಷ್ಟು ಇಳಿಕೆ ಮಾಡಿದೆ. ಇದರಿಂದ ಶೇ.6.25 ರಷ್ಟಿದ್ದ ರೆಪೋ ದರ ಶೇ.6ಕ್ಕೆ ಇಳಿಕೆಯಾಗಿದೆ. ಆರ್ಬಿಐ ಗೌವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ 2019-20ರ ಹಣಕಾಸು ವರ್ಷದ ಮೊದಲ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯು ಈ ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಫೆಬ್ರವರಿಯಲ್ಲಿ ಆರ್ಬಿಐ ತನ್ನ ರೆಪೋ ದರವನ್ನು 25 ಮೂಲ ಅಂಕಿ ಕಡಿತಗೊಳಿಸುವ ಮೂಲಕ ಶೇ.6.55ರಿಂದ ಶೇ.6.25ಕ್ಕೆ ಇಳಿಕೆ ಮಾಡಿತ್ತು. ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈ ಮಾಸಿಕ ಸಭೆ ಇಂದು ನಡೆದಿದ್ದು, ರೆಪೋ ದರವನ್ನು ಶೇ.6.25ರಿಂದ ಶೇ.6ಕ್ಕೆ ಇಳಿಕೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಹಕ ದರ ಸೂಚಿಯು ಕಳೆದ ಆರು ತಿಂಗಳಿನಿಂದ ಶೇ.4ರ ಒಳಗಿದ್ದು, ಮುಂದಿನ ಕೆಲ ತಿಂಗಳುಗಳವರೆಗೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ಆರ್ಬಿಐ ರೆಪೋ ದರವನ್ನು ಕಡಿತ ಮಾಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರ್ಬಿಐ ಬಡ್ಡಿದರ ಇಳಿಕೆಯಾಗಿರುವುದರಿಂದ ಗೃಹ ಮತ್ತು ವಾಹನ ಸಾಲಗಳ ಬಡ್ಡಿ ದರ ಇಳಿಸಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತದೆ. ರೆಪೋ ದರ ಇಳಿಕೆಯ ಲಾಭವನ್ನು ಬ್ಯಾಂಕುಗಳು ಗ್ರಾಹಕರಿಗೆ ವರ್ಗಾಯಿಸಬೇಕು. ಫೆಬ್ರವರಿಯಲ್ಲಿ ರೆಪೋ ದರ ಇಳಿಕೆಯ ಬೆನ್ನಲ್ಲಿ ಕೆಲವು ಬ್ಯಾಂಕುಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಸ್ವಲ್ಪ ಇಳಿಕೆ ಮಾಡಿವೆ. ಈಗ ಮತ್ತೆ ರೆಪೋ ದರ ಕಡಿತವಾಗಿರುವುದಿರಿಂದ ಬಡ್ಡಿ ದರ ಮತ್ತಷ್ಟು ಕಡಿತವಾಗಲಿದೆ. ಬ್ಯಾಂಕುಗಳಲ್ಲಿ ಸಾಲ ಮಾಡಿದವರಿಗೆ ಇದರಿಂದ ಅನುಕೂಲವಾಗಲಿದೆ. 2019-20 ಸಾಲಿನಲ್ಲಿ ಜಿಡಿಪಿ ಶೇ.7.2ರಷ್ಟು ಪ್ರಗತಿ ಹೊಂದಿದೆ ಎಂದು ಆರ್ಬಿಐ ಅಂದಾಜಿಸಿದೆ. ಪ್ರಸ್ತುತ ಹಣಕಾಸು ವರ್ಷದ ಮೊದಲ ಅರ್ಧ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.6.8-7.1 ರ ಶ್ರೇಣಿಯಲ್ಲಿ ಪ್ರಗತಿ ಸಾಧಿಸಿದೆ. ಹಾಗೂ ದ್ವಿತಿಯಾರ್ಧ ಸಾಲಿನಲ್ಲಿ ಜಿಡಿಪಿ ಶೇ.7.3-7.4 ರ ಶ್ರೇಣಿಯಲ್ಲಿ ಸಮತೋಲನ ಕಾಯ್ದುಕೊಂಡಿದೆ.