ಹಾಸನ, ಏ. 4, ನ್ಯೂಸ್ ಎಕ್ಸ್ ಪ್ರೆಸ್: ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಹಾಸನ ಜಿಲ್ಲೆಯಲ್ಲಿ 2 ದಿನ ಪ್ರವಾಸ ಮುಗಿದಿದೆ. ಇಂದು ಮತ್ತೆ ನಾಳೆ 2 ದಿನ ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು,ಏ. 7ರಂದು ತುಮಕೂರಿನಲ್ಲಿ ,ಏ. 8ರಂದು ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವರೊಟ್ಟಿಗೆ ಪ್ರಚಾರ ಮಾಡುತ್ತೇನೆ. ಏ. 9 ರಿಂದ 11 ರ ವರೆಗೆ ಸಿದ್ದರಾಮಯ್ಯ, ನಾನು ರಾಜ್ಯದಲ್ಲಿ ಒಟ್ಟಿಗೆ ಪ್ರಚಾರ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಹಾಸನ ಜಿಲ್ಲೆಯ ಜನರು ನನಗೆ 28 ವರ್ಷ ಶಕ್ತಿ ತುಂಬಿದ್ದಾರೆ.
ಒಂದೇ ಒಂದು ಸಲ ನನ್ನ ತಪ್ಪಿನಿಂದ ಸೋತಿದ್ದೇನೆ. ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ ಅಂತಾ ದೇಶದ ಹಲವರು ಒತ್ತಾಯ ಮಾಡಿದರು. ಗುಲಾಬ್ ನಬಿ ಅಜಾದ್, ಮಮತಾಗೆ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಕೂಡಾ ಒತ್ತಾಯ ಮಾಡಿದರು. ಪರಮೇಶ್ವರ್ ನಮ್ಮ ಮನೆಗೆ ಬಂದು, ನೀವು ನಿಲ್ಲಲೇ ಬೇಕು ಅಂತಾ ಒತ್ತಾಯ ಮಾಡಿದರು. ನೀವೇನು ಭಯಪಡೋದು ಬೇಡ ನಾವಿದ್ದೇವೆ ಅಂತಾ ಪರಮೇಶ್ವರ್ ಭರವಸೆ ನೀಡಿದರು. ಹಾಗಾಗಿ ನಾನು ನಾಮಪತ್ರದ ಕಡೆಯ ದಿನ ಯೋಚನೆ ಮಾಡಿ ನಿರ್ಧಾರ ಕೈಗೊಂಡೆ ಎಂದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಹೇಳಿದರು.