ಮಹಿಳೆಯರಿಗೆ ಅವಮಾನಕಾರಿ ಹೇಳಿಕೆ: ಆಗ ರೇವಣ್ಣ, ಈಗ ಕುಮಾರಣ್ಣನ ಸರದಿ!

ಮಹಿಳೆಯರಿಗೆ ಅವಮಾನಕಾರಿ ಹೇಳಿಕೆ: ಆಗ ರೇವಣ್ಣ, ಈಗ ಕುಮಾರಣ್ಣನ ಸರದಿ!

ಬೆಂಗಳೂರು, ಮಾ, 30, ನ್ಯೂಸ್ ಎಕ್ಸ್ ಪ್ರೆಸ್: ಕುಮಾರಸ್ವಾಮಿ ಅವರ ಹೇಳಿಕೆ ಎಲ್ಲಾ ಮಹಿಳೆಯರಿಗೂ ಮಾಡಿರುವ ಅವಮಾನ ಎಂದು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಂಡ ಸತ್ತ ದುಃಖ ಅವರ ಮುಖ್ಯದಲ್ಲಿ ಕಾಣುತ್ತಿಲ್ಲ’ ಎಂದಿದ್ದ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದರು. ಈ ರೀತಿ ಮಾತನಾಡುವುದು ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ, ಇದು ಎಲ್ಲಾ ಮಹಿಳೆಯರಿಗೂ ಮಾಡಿದ ಅವಮಾನ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿಲು ಅಂಬಿ ಅಭಿಮಾನಿ ಓರ್ವ ಉರುಳು ಸೇವೆ ಮಾಡಿದ್ದಾರೆ. ಮೈಸೂರಿನ ಕೆ.ಆರ್.ನಗರದ ಅಂಬಿ ಅಭಿಮಾನಿ ಬೆನಕ ಪ್ರಸಾದ್ ಸುಮಲತಾ ಗೆಲುವಿಗಾಗಿ ಉರುಳುಸೇವೆ ಮಾಡಿದ್ದಾರೆ. ಸುಮಲತಾ ಅವರು ಎತ್ತುಗಳನ್ನು ಹಿಡಿದಿರುವ ರೈತ, ಕಬ್ಬಿನ ಗದ್ದೆ, ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ಕೊಡಿರೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಮೊದಲಿಗೆ ಅವರಿಗೆ ತಳ್ಳುವ ಗಾಡಿಯ ಗುರುತು ನೀಡಲಾಗಿತ್ತು, ಆ ನಂತರ ಅದು ಬದಲಾಗಿ ಕಹಳೆ ಊದುವ ವ್ಯಕ್ತಿಯ ಗುರುತು ದೊರೆತಿದೆ.

ಫ್ರೆಶ್ ನ್ಯೂಸ್

Latest Posts

Featured Videos