ಕಾಂಗ್ರೆಸ್, ಉಗ್ರರ ಹೊರತುಪಡಿಸಿ ದೇಶ ಖುಷಿಯಾಗಿದೆ: ಮೋದಿ

ಕಾಂಗ್ರೆಸ್, ಉಗ್ರರ ಹೊರತುಪಡಿಸಿ ದೇಶ ಖುಷಿಯಾಗಿದೆ: ಮೋದಿ

ನವದೆಹಲಿ, ಮಾ.30, ನ್ಯೂಸ್ ಎಕ್ಸ್ ಪ್ರೆಸ್:  ಕಾಂಗ್ರೆಸ್ ಪಕ್ಷವು ದೇಶವನ್ನು ಹಿಂದುಳಿದ ಹಾಗೂ ಬಡ ರಾಷ್ಟ್ರವನ್ನಾಗಿ ಜಗತ್ತಿನ ಮುಂದೆ ಬಿಂಬಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಅವರು ಅಸ್ಸಾಮ್ ಮೊರಾನ್ ನಲ್ಲಿ ನಡೆದ ಬಿಜೆಪಿ ಪಕ್ಷದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

`ಕಾಂಗ್ರೆಸ್ ಒಂದೇ ಒಂದು ಕುಟುಂಬದ ಸೇವೆ ಮಾಡುತ್ತಿದೆಯೇ ವಿನಾ ದೇಶದ ಪ್ರಗತಿ ಆ ಪಕ್ಷಕ್ಕೆ ಮುಖ್ಯವಾಗಿಲ್ಲ. ಅದು ಶ್ರೇಷ್ಠ ರಾಷ್ಟ್ರವಾದ ಭಾರತಕ್ಕೆ ದುರ್ಬಲ ರಾಷ್ಟ್ರವೆಂಬ ಗುರುತು ಅಂಟಿಸುವಂತಹ ಆಡಳಿತವನ್ನು ನೀಡಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದರು.

`ಈ ದೇಶದಲ್ಲಿ ಎರಡು ಕಡೆಯ ಜನರನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆಗಳಲ್ಲಿ ಖುಷಿಯಿದೆ. ಒಂದು ಕಾಂಗ್ರೆಸ್ ಕುಟುಂಬ ಹಾಗೂ ಇನ್ನೊಂದು ಭಯೋತ್ಪಾದಕರ ಮನೆಗಳಲ್ಲಿ. ಇಡೀ ಜಗತ್ತೇ ಭಾರತದ ಜೊತೆಗೆ ನಿಂತಿದ್ದ ಕಾಂಗ್ರೆಸ್ ಮಾತ್ರ ತನ್ನ ನಿದ್ರೆಯನ್ನು ಕಳೆದುಕೊಂಡಿದೆ. ಮೂರು ದಿನಗಳ ಹಿಂದೆ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಉಪಗ್ರಹವನ್ನು ಹೊಡೆದುರುಳಿಸಿರುವುದು ಕಾಂಗ್ರೆಸ್ ನ ಕಣ್ಣಲ್ಲಿ ಕಣ್ಣೀರು ತರಿಸಿದೆ ಎಂದು ಇದೇ ವೇಳೆ ಮೋದಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos