‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ವತಿಯಿಂದ ಎಜುಕೇಷನ್‌ ಎಕ್ಸ್‌ ಪೋ

  • In Metro
  • March 29, 2019
  • 342 Views
‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ವತಿಯಿಂದ ಎಜುಕೇಷನ್‌ ಎಕ್ಸ್‌ ಪೋ

ಮೈಸೂರು, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಬಳಿಕ ಯಾವ ಕೋರ್ಸ್‌, ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ‘ಕನ್ನಡಪ್ರಭ’ ಮತ್ತು ‘ಸುವರ್ಣ ನ್ಯೂಸ್‌’ ಸುದ್ದಿವಾಹಿನಿ ಮಾ.30 ಮತ್ತು 31 ರಂದು ಎಜುಕೇಷನ್‌ ಎಕ್ಸ್‌ ಪೋ ಆಯೋಜಿಸಿದೆ. ಜಯನಗರ ‘ಟಿ’ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ನಟಿ ಪ್ರಣಿತಾ ಸುಭಾಷ್‌, ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚನ್ನಣ್ಣನವರ್‌ ಚಾಲನೆ ನೀಡಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಎಕ್ಸ್‌ ಪೋದಲ್ಲಿ ಬೆಂಗಳೂರು ನಗರ ಮತ್ತು ರಾಜ್ಯದ ವಿವಿಧೆಡೆ ಇರುವ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಕ್ಸ್‌ ಪೋ ಆಯೋಜಿಸಲಾಗಿದೆ. ಕಾಲೇಜು, ಕೋರ್ಸ್‌ಗಳು, ಕಾಲೇಜಿನ ಬೋಧಕ ವರ್ಗ, ಮೂಲ ಸೌಕರ್ಯಗಳು, ಪ್ರಯೋಗಾಲಯ, ಕಾಲೇಜು ಕ್ಯಾಂಪಸ್‌, ಕಾಲೇಜಿನ ವಿಶೇಷತೆಗಳ ಜತೆಗೆ ತಮಗಿರುವ ಗೊಂದಲಗಳನ್ನು ಬಗೆಹರಿಸಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದ್ಬಳಕೆ ಮಾಡಿಕೊಳ್ಳಬಹುದು.

ಫ್ರೆಶ್ ನ್ಯೂಸ್

Latest Posts

Featured Videos