‘ಮೋದಿ ಅಲೆ’ಯಲ್ಲಿ ಕೊಚ್ಚಿ ಹೋದ ‘9 ಮಾಜಿ ಮುಖ್ಯಮಂತ್ರಿಗಳು’..!

‘ಮೋದಿ ಅಲೆ’ಯಲ್ಲಿ ಕೊಚ್ಚಿ ಹೋದ ‘9 ಮಾಜಿ ಮುಖ್ಯಮಂತ್ರಿಗಳು’..!

ನವದೆಹಲಿ, ಮೇ. 24, ನ್ಯೂಸ್‍ ಎಕ್ಸ್ ಪ್ರೆಸ್‍:  ಬಿಜೆಪಿ ನೇತೃತ್ವದ ಎನ್ ಡಿಎ 349 ಸ್ಠಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತದೊಂದಿಗೆ ಸತತ ಎರಡನೇ ಬಾರಿ ಅಧಿಕಾರಕ್ಕೇರಲು ಸಜ್ಜಾಗಿದೆ. ಆದರೆ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದು, ಮೋದಿ ಅಲೆಯಲ್ಲಿ ವಿವಿಧ ರಾಜ್ಯಗಳ 9 ಮಾಜಿ ಮುಖ್ಯಮಂತ್ರಿಗಳು ಕೊಚ್ಚಿ ಹೋಗಿದ್ದಾರೆ.

ಮೊಯ್ಲಿ, ಶೀಲಾ ದೀಕ್ಷಿತ್, ದಿಗ್ವಿಜಯ್‍ ಸಿಂಗ್‍ ಗೆ ಸೋಲು!

ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಭೋಪಾಲ್ ನಲ್ಲಿ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಈಶಾನ್ಯ ದೆಹಲಿಯಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್, ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ಹರಿಶ್ ರಾವತ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವಾಣ್, ಸುಶಿಲ್ ಕುಮಾರ್ ಶಿಂಧೆ, ಮೇಘಾಲಯ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗಮ್, ಅರುಣಾಚಲ ಮಾಜಿ ಮುಖ್ಯಮಂತ್ರಿ ನಬಮ್ ಟುಕಿ ಅವರು ಸೋತು ಮನೆಗೆ ಹೋಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos