400 ವರ್ಷದ ಮಲ್ಲಿಕ್ ದರ್ಗಾ

400 ವರ್ಷದ ಮಲ್ಲಿಕ್ ದರ್ಗಾ

ತುಮಕೂರು, ನ. 10 : ಜಿಲ್ಲೆಯ ಶಿರಾ ನಗರದ ಹಜರತ್ ಮಲ್ಲಿಕ್ ರೆಹಮಾನ್ ಪಾಷ (ಮಲ್ಲಿಕ್ ರೆಹನ್ ದರ್ಗಾ) ದರ್ಗಾ 400 ವರ್ಷಗಳ ಇತಿಹಾಸ ಹೊಂದಿದೆ. ಬಿಜಾಪುರ ಸುಲ್ತಾನ ಆದಿಲ್ ಷಾ ಆಳ್ವಿಕೆಯಲ್ಲಿ ಶಿರಾಕ್ಕೆ ಗವರ್ನರ್ ಆಗಿ ನೇಮಿಸಲ್ಪಟ್ಟ ಮಲ್ಲಿಕ್ ರೆಹಾನ್ 1638 ರಿಂದ 1650ರವರೆಗೆ ಆಡಳಿತ ನಡೆಸಿದ್ದು ಆತ ದೈವಭಕ್ತನಾಗಿದ್ದ. ದರ್ಗಾ ಹಾಗೂ ಮಸೀದಿ ನಿರ್ವಿುಸುವಾಗ ಕೂಲಿಕಾರ್ವಿುಕರ ಶ್ರಮಕ್ಕೆ ಹಣದ ಬದಲು ಅವರು ನಿರ್ವಿುಸುತ್ತಿದ್ದ ಮಣ್ಣಿನ ಗುಡ್ಡೆಯನ್ನು ದಿವ್ಯದಂಡದಿಂದ ಸ್ಪರ್ಶಿಸುತ್ತಿದ್ದ.

ಅದು ಕಾರ್ವಿುಕರ ಶ್ರಮಕ್ಕೆ ತಕ್ಕಂತೆ ಹಣವಾಗಿ ಪರಿವರ್ತನೆಗೊಳ್ಳುತ್ತಿತ್ತು. ಇದನ್ನು ಕಂಡ ಜನ ಅವರ ಕಾಲಾನಂತರ ಅವರ ಸಮಾಧಿಯನ್ನೇ ದರ್ಗಾದಲ್ಲಿ ನಿರ್ವಿುಸಿದ್ದು ಮಲ್ಲಿಕ್ ರೆಹಾನ್ ದರ್ಗಾ ಎಂಬ ಹೆಸರು ಪಡೆಯಿತು. ಐದು ಶುಕ್ರವಾರ ಪುರಿ, ಕರಿಮೆಣಸು ತಂದು ದರ್ಗಾಕ್ಕೆ ನೈವೇದ್ಯ ಮಾಡಿ ಅಲ್ಲಿ ಕೊಡುವ ಎಣ್ಣೆಯನ್ನು ಮೈಗೆ ಸವರಿಕೊಂಡರೆ ಚರ್ಮರೋಗ ವಾಸಿಯಾಗಿರುವ ನಿದರ್ಶನಗಳಿವೆ. ಮಕ್ಕಳಿಲ್ಲದ ದಂಪತಿ ಹರಕೆ ಕಟ್ಟಿ ಸಕ್ಕರೆ ಹೊದಿಸಿದರೆ (ಸಕ್ಕರೆ ನೈವೇದ್ಯ) ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಇದೇ ರೀತಿ ಹಲವು ಸಮಸ್ಯೆಗಳಿಗೆ ಧರ್ಮಭೇದ ಮರೆತು ರಾಜ್ಯಾದ್ಯಂತ ಭಕ್ತರು ಆಗಮಿಸಿ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos