ಕಳೆದ ವರ್ಷಕ್ಕಿಂತ ಶೇ 4ರಷ್ಟು ಹೆಚ್ಚು ಬಿತ್ತನೆ

ಕಳೆದ ವರ್ಷಕ್ಕಿಂತ ಶೇ 4ರಷ್ಟು ಹೆಚ್ಚು ಬಿತ್ತನೆ

ದೇವನಹಳ್ಳಿ, ಅ. 10: ಜಿಲ್ಲೆಯಲ್ಲಿರುವ ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಚಟುವಟಿಕೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಬೆಳೆಗಳ ಆಕಸ್ಮಿಕ ರೋಗ ಮತ್ತು ಕೀಟಗಳ ಬಗ್ಗೆ ಕೃಷಿ ಅಧಿಕಾರಿಗಳಿಗೆ ರೈತರು ತಕ್ಷಣ ಮಾಹಿತಿ ನೀಡುವಂತಾಗಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಗೊಬ್ಬರದ ಕೊರತೆ ಇರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ಶೇ.4 ರಷ್ಟು ಹೆಚ್ಚು ಬಿತ್ತನೆಯಾಗಿದೆ. ವಾಡಿಕೆ ಮಳೆಗಿಂತ 26 ಮಿಮಿ ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ ಮುಂಗಾರು ಹಂಗಾಮ ಜನವರಿಯಿಂದ ಆ. 4 ರವರೆಗೆ 616 ಮಿಮಿ ಆಗಿದೆ. ಪ್ರಸ್ತುತ ಮಳೆ ಪ್ರಮಾಣ 642 ಮಿಮಿ ಆಗಿದ್ದು, ವಾಡಿಕೆ ಮಳೆಗಿಂತ 26 ಮಿಮಿ ಹೆಚ್ಚು ಸುರಿದಿದೆ. ರೈತರು ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ರಾಗಿ ಬೆಳೆಗಾರರು ಬಿತ್ತನೆಗೆ ಈಗಲೂ ಮುಂದಾಗುತ್ತಿದ್ದಾರೆ. ಈಗಾಗಲೇ ಬಿತ್ತನೆ ಪ್ರಮಾಣ ರಾಗಿ 40116 ಹೆಕ್ಟರು, ಮುಸುಕಿನ ಜೋಳ 82200 ಹೆ.  ಭತ್ತ 146 ಹೆ.  ತೃಣದಾನ್ಯಗಳು 71 ಹೆ.  ಪಾಪ್‌ಕಾರ್ನ್ 216 ಹೆ.  ತೊಗರಿ 667, ಹುರುಳಿ 477 ಹೆ. ಅಲಸಂದೆ 405 ಹೆ.  ಅವರೆ 1255 ಹೆ.  ನೆಲಗಡಲೆ 190 ಹೆ.  ಹರಳು 102 ಹೆ.  ಹುಚ್ಚೆಳ್ಳು 15 ಹೆ.  ಸಾಸಿವೆ 98 ಹೆಕ್ಟೆರುಗಳಲ್ಲಿ ಬಿತ್ತನೆ ಕಾರ್ಯವಾಗಿದೆ.

ತಾಲೂಕುವಾರು ಬಿತ್ತನೆ ಪ್ರಮಾಣ

ದೇವನಹಳ್ಳಿ  ಬಿತ್ತನೆ ಗುರಿ 12550 ಬಿತ್ತನೆ ಪ್ರಮಾಣ 10050 ಶೇಕಡವಾರು 82

ದೊಡ್ಡಬಳ್ಳಾಪುರ ಬಿತ್ತನೆ ಗುರಿ 22489  ಬಿತ್ತನೆ ಪ್ರಮಾಣ 21250 ಶೇಕಡವಾರು 94

ಹೊಸಕೋಟೆ ಬಿತ್ತನೆ ಗುರಿ 10609 ಬಿತ್ತನೆ ಪ್ರಮಾಣ 8423 ಶೇಕಡವಾರು 79

ನೆಲಮಂಗಲ ಬಿತ್ತನೆ ಗುರಿ 15055  ಬಿತ್ತನೆ ಪ್ರಮಾಣ 13643  ಶೇಕಡವಾರು 91

ಜಿಲ್ಲೆಯಲ್ಲಿ ನೀರವಾರಿ ಮತ್ತು ಖುಷ್ಕಿ ಸೇರಿ 60403 ಹೆಕ್ಟೆರುಗಳಲ್ಲಿ ಕೃಷಿ ಬಿತ್ತನೆ ಗುರಿ ಪೈಕಿ 53326 ಹೆಕ್ಟೆರು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಶೇಕಡ 84 ರಷ್ಟು ಆಗಿತ್ತು. ಈ ಬಾರಿ ಶೇ. 88 ರಷ್ಟು ಬಿತ್ತನೆಯಾಗಿದೆ. ಶೇ.4ರಷ್ಟು ಹೆಚ್ಚು ಬಿತ್ತನೆಯಾಗಿದೆ. ಈಗಾಗಲೇ ಸೆ. 30 ಕ್ಕೆ ಮುಂಗಾರು ಹಂಗಾಮ ಮುಕ್ತಾಯವಾಗಿದೆ. ಹಿಂಗಾರು ಹಂಗಾಮಿನಲ್ಲಿ ಹುರುಳಿ ಬಿತ್ತನೆ ಮತ್ತು ನೆವೆಂಬರ್ ಅಂತಿಮ ಹಾಗು ಡಿಸೆಂಬರ್ ತಿಂಗಳಿನಲ್ಲಿ ಕಡಲೆಗೆ ಬಿತ್ತನೆ ಕಾರ್ಯಕ್ಕೆ ಸಕಾಲವಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರೇವಣ್ಣ ಮನಗೋಳಿ ಮಾತನಾಡಿ, 2019 ರ ಮಾಹೆಯಲ್ಲಿ ವಿವಿಧ ರಸಗೊಬ್ಬರ  ನಾಲ್ಕು ಹೋಬಳಿಗಳ ವ್ಯಾಪ್ತಿಯಲ್ಲಿ ಯೂರಿಯಾ 14 ಟನ್, ಅಮೋನಿಯಂ ಸಲ್ಫೆಟ್ 34.25  ಕಾಂಪ್ಲೆಕ್ಸ್ 649.5, ಎಸ್‌ಎಸ್‌ಪಿ 1517 ಟನ್, ಡಿಎಪಿ 424.5, ಪೊಟಾಷ್ 11.15 ಟನ್ ಇದೆ.  ರೈತರು ಯಾವುದೇ ರೀತಿ ಹಿಂಜರಿಯದೆ ಸಕಾಲದಲ್ಲಿ ಎಲ್ಲ ಅವಶ್ಯಕತೆಗಳು ಪೂರ್ಣಗೊಳಲಿವೆ. ಕಳೆದ ಆರೇಳು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದಿರಂದ ರೈತರು ಸಂತಸದಲ್ಲಿದ್ದಾರೆ. ರಾಗಿ ಪೈರಿಗೆ ಯೂರಿಯಾ ಬೇಡಿಕೆ ಹೆಚ್ಚಾಗುವ ಮಾಹಿತಿ ಇದೆ. ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿರುವ 13 ಸಹಕಾರ ಸಂಸ್ಥೆಗಳು ಮತ್ತು 14 ಖಾಸಗಿ ಸಂಸ್ಥೆಗಳಲ್ಲಿ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು

ಫ್ರೆಶ್ ನ್ಯೂಸ್

Latest Posts

Featured Videos