300 ಕೋಟಿ ಮೌಲ್ಯದ ಆಸ್ತಿ ವಶಕ್ಕೆ

300 ಕೋಟಿ ಮೌಲ್ಯದ ಆಸ್ತಿ ವಶಕ್ಕೆ

ಬೆಂಗಳೂರು, ಡಿ. 18: ಬಿಡಿಎ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರ ನೇತೃತ್ವಲ್ಲಿ ಬಿಡಿಎ ಅಧಿಕಾರಿಗಳು ನಾಗವಾರದ ಅನಧಿಕೃತ ಕಟ್ಟಡಗಳ ಮೇಲೆ ದಾಳಿ ನಡೆಸಿದರು. ನಾಗವಾರದ ಸರ್ವೆ ನಂ.75ರಲ್ಲಿ ಎಚ್’ಬಿಆರ್ 2ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ 6.3 ಎಕರೆ ಜಾಗ ಪ್ರದೇಶವನ್ನು ಪ್ರಾಧಿಕಾರ ಮೀಸಲಿಟ್ಟಿದೆ. ಈ ಪ್ರದೇಶದಲ್ಲಿ 1.26 ಎಕರೆ ವರ್ತುಲ ರಸ್ತೆಗೆ ಮತ್ತು ಉಳಿದ 4.17 ಎಕರೆ ಪ್ರದೇಶವನ್ನು ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ವಶದಲ್ಲಿತ್ತು. ಈ ಪ್ರದೇಶವನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡಗಳು ಮತ್ತು ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದರು.

ನಗರದಲ್ಲಿ ಸುಮಾರೂ 5 ಸಾವಿರ ಕೋಟಿ ಮೌಲ್ಯದ ಒತ್ತುವರಿಯಾಗಿದ್ದು, ಶೀಘ್ರವೇ ಒತ್ತುವರಿದಾರರನ್ನು ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ನಿವೇಶನವಗಳನ್ನು ಹಿಂಪಡೆಯಲು ಕಾರ್ಯಾಚರಣೆ ನಡೆಸುತ್ತಿದೆ ಎಂದು ಆಯುಕ್ತ ಡಾ.ಜಿ.ಸಿ.ಪ್ರಕಾಶ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕ ಡಾ.ಶಿವಕುಮಾರ್, ಬಿಡಿಎ ಅಭಿಯಂತರ ಸದಸ್ಯ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಿಡಿಎ ಜಾಗ ಒತ್ತುವರಿ ಮಾಡಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿತ್ತ ಕಟ್ಟಡ ತೆರವುಗೊಳಿಸಿ ಸುಮಾರು ರೂ.300 ಕೋಟಿ ಮೌಲ್ಯದ ಆಸ್ತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos