ಸೂಲಿಬೆಲೆ, ಡಿ. 21: ಇಲ್ಲಿನ ರೇಷ್ಮೇ ಬೇಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸ್ತ್ರೀಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳಿಗೆ 30 ಲಕ್ಷ ಸಾಲ ವಿತರಣೆ ನೆರವೇರಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಬಿ.ವಿ.ಸತೀಶಗೌಡ ಸಾಲ ವಿತರಣೆ ನೆರವೇರಿಸಿ ಮಾತನಾಡಿ, ಮಹಿಳೆಯರು ಸ್ವಂತ ಉದ್ಯಮಗಳು ಸ್ಥಾಪನೆ ಮಾಡುವ ಮೂಲಕ ಸ್ವಾವಲಂಬಿ ಜೀವನ ನೆಡೆಸಲು ಮುಂದಾಗಬೇಕು, ಮಹಿಳಾ ಸಬಲೀಕರಣವಾಗಬೇಕು ಎಂದು ಹೇಳಿದರು.
ಆಂಜನೇಯಸ್ವಾಮಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘ 10 ಲಕ್ಷ, ಶಾರಾಧ ಸಂಘ 5 ಲಕ್ಷ, ಉದಯ ಜ್ಯೋತಿ 5 ಲಕ್ಷ, ವರಲಕ್ಷ್ಮಿ ಸಂಘ 5 ಲಕ್ಷ ವಿನಾಯಕ ಸಂಘ 5 ಲಕ್ಷ ಸೇರಿದಂತೆ 30 ಲಕ್ಷಗಳ ಸಾಲ ವಿತರಣೆ ಮಾಡಲಾಯಿತು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ಶ್ರೀನಿವಾಸಮೂರ್ತಿ ಮಾತನಾಡಿ, ಬ್ಯಾಂಕಿನ ಸ್ವಂತ ಬಂಡವಾಳದ ಹಣದಲ್ಲಿ ಸ್ತ್ರೀ ಶಕ್ತಿಗಳ ಅಭಿವೃದ್ದಿಗಾಗಿ ಸಾಲ ನೀಡಲಾಗಿದ್ದು, ತಾವು ಸಾಲ ಮರುಪಾವತಿ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಅಬ್ದುಲ್ ವಾಜೀದ್, ಲೆಕ್ಕ ಗುಮಾಸ್ತ ಜಿ.ಎಂ.ನಾಗೇಶ್ ಇತರರು ಇದ್ದರು.