ಬೆಂಗಳೂರು, ಮೇ. 25, ನ್ಯೂಸ್ ಎಕ್ಸ್ ಪ್ರೆಸ್: ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಬೇಕೆಂಬ ಕೂಗು ಹಲವು ಕಾಲದಿಂದ ಕೇಳಿಬರುತ್ತಿದೆ. ಆದರೂ ಕೂಡ ಇದು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ.
ಈ ಬಾರಿ ಒಟ್ಟು 76 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ 66 ಜನ ಮಹಿಳೆಯರು ಆಯ್ಕೆಯಾಗಿದ್ದರು. ಕರ್ನಾಟಕದಿಂದ ಸುಮಲತಾ ಅಂಬರೀಶ್ ಹಾಗೂ ಶೋಭಾ ಕರಂದ್ಲಾಜೆ ಲೋಕಸಭೆಗೆ ಆಯ್ಕೆಯಾದ ಮಹಿಳೆಯರಾಗಿದ್ದಾರೆ.
ಉತ್ತರ ಪ್ರದೇಶ ಮತ್ತು ಪಶ್ಚಿಮಬಂಗಾಲದಿಂದ ತಲಾ 11 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದು ಒಡಿಶಾದಿಂದ 6 ಜನ ಮಹಿಳೆಯರು ಆಯ್ಕೆಯಾಗಿದ್ದಾರೆ. ತಮಿಳುನಾಡಿನಿಂದ 3 ಜನರು, ಆಂಧ್ರಪ್ರದೇಶದಿಂದ 4 ಜುನರು, ಮಹಾರಾಷ್ಟ್ರದಿಂದ 8 ಜನರು ಸೇರಿದಂತೆ ಒಟ್ಟು 76 ಜನ ಮಹಿಳೆಯರು ಈ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಒಟ್ಟು ಸದಸ್ಯರ ಸಂಖ್ಯೆಗೆ ಹೋಲಿಸಿದರೆ ಮಹಿಳೆಯರ ಪ್ರಮಾಣ ಶೇಕಡಾ 14 ರಷ್ಟಿದೆ.