ನವದೆಹಲಿ, ಆ.17 : ಇಂದು ಬೆಳಗ್ಗೆ ಭೂತಾನ್ ಪಾರೋ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಮಂತ್ರಿ ಮೋದಿ ಅವರನ್ನು ಲುಟೊಯ್ ಶೇರಿಂಗ್ ಸ್ವಾಗತಿಸಿದರು. ಸಾಂಪ್ರದಾಯಿಕ ಸ್ವಾಗತದೊಂದಿಗೆ ಗೌರವ ರಕ್ಷೆ ನೀಡಲಾಯಿತು. ಮೋದಿ ಭೂತಾನ್ ಪ್ರವಾಸದ ವೇಳೆ ಅಲ್ಲಿನ ದೊರೆ ಜಿಗ್ಮೆ ಕೆ.ಎನ್.ವಾಂಗ್ಚುಕ್ ಮತ್ತು ತಮ್ಮ ಸಹವರ್ತಿ ಲುಟೊಯ್ ಶೇರಿಂಗ್ ಸೇರಿದಂತೆ ಉನ್ನತ ಮುಖ್ಯಸ್ಥರನ್ನು ಭೇಟಿ ಮಾಡಿ ದ್ವಿಪಕ್ಷಿಯ ಬಾಂಧವ್ಯ ಬಲವರ್ಧನೆ ಕುರಿತು ಸಮಾಲೋಚಿಸಿದ್ದಾರೆ.
ಹಿಮಾಲಯ ರಾಷ್ಟ್ರ ಪ್ರವಾಸದ ವೇಳೆ ರಾಯಲ್ ಯುನಿರ್ವಸಿಟ್ ಆಫ್ ಭೂತಾನ್ನ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸುವ ಕಾರ್ಯಕ್ರಮ ಇದೆ. ಭೂತಾನ್ ಪ್ರವಾಸಕ್ಕೂ ಮುನ್ನ ನಿನ್ನೆ ಟ್ವಿಟ್ ಮಾಡಿದ ಮೋದಿ ತಮ್ಮ ಪ್ರವಾಸದಿಂದ ಉಭಯ ದೇಶಗಳ ನಡುವಣ ಬಾಂಧವ್ಯ ಬಲವರ್ಧನೆ ಮತ್ತಷ್ಟು ಗಟ್ಟಿಯಾಗಲಿದೆ.