ನವದೆಹಲಿ, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 19 ಜನ ಹಿರಿಯ ಸೇನಾ ಕಮಾಂಡರ್ಗಳಿಗೆ ಪರಮ ವಿಶಿಷ್ಟ ಪದಕಗಳನ್ನು ಪ್ರದಾನ ಮಾಡಿದರು.
2016ರಲ್ಲಿ ಸೇನೆಯ ಮುಖ್ಯಸ್ಥರಾಗಿ ನೇಮಕಗೊಂಡ ರಾವತ್ ಇದಕ್ಕೂ ಮುಂಚೆ ತಮ್ಮ ಸೇವೆಗಾಗಿ ಉತ್ತಮ ಯೋಧ ಸೇವಾ ಪದಕ, ಅತಿ ವಿಶಿಷ್ಟ್ ಸೇವಾ ಪದಕ, ವಿಶಿಷ್ಟ್ ಸೇವಾ ಪದಕ, ಯೋಧ ಸೇವಾ ಪದಕ ಹಾಗೂ ಸೇನಾ ಪದಕಗಳನ್ನು ಪಡೆದುಕೊಂಡಿದ್ದಾರೆ.
ತಮ್ಮ ಸೇವಾವಧಿಯಲ್ಲಿ ಶಾಂತಿ ಹಾಗೂ ಶೌರ್ಯವನ್ನು ಪ್ರದರ್ಶಿಸಿ ದೇಶದ ಹಿತವನ್ನು ಕಾಪಾಡಿದ್ದ 15 ಜನರಿಗೆ ಲೆಫ್ಟಿನಂಟ್ ಜನರಲ್ಗಳು ಹಾಗೂ ಮೂವರು ಪ್ರಮುಖ ಜನರಲ್ಗಳಿಗೂ ಕೂಡ ಪರಮ ವಿಶಿಷ್ಟ ಪದಕಗಳನ್ನು ರಮಾನಾಥ್ ಕೋವಿಂದ್ ಪ್ರದಾನ ಮಾಡಿದರು.
ದೇಶದ ಅತ್ಯುನ್ನತ 2ನೇ ಪ್ರಶಸ್ತಿಯೆಂದೇ ಬಿಂಬಿತಗೊಂಡಿರುವ ಕೀರ್ತಿ ಚಕ್ರ, ಶೌರ್ಯ ಚಕ್ರಗಳನ್ನು ಇದೇ ವೇಳೆ ಪ್ರದಾನ ಮಾಡಿದರು. ಜಮ್ಮು ಕಾಶ್ಮೀರದ ಕುಪ್ಪವಾರಾದಲ್ಲಿ 3 ಉಗ್ರಗಾಮಿಗಳನ್ನು ಕೊಂದಿದ್ದ ಮೇಜರ್ ತುಷಾರ್ ಗುಬ್ಬಾ ಅವರಿಗೆ ಕೀರ್ತಿ ಚಕ್ರವನ್ನು ಪ್ರದಾನ ಮಾಡಿದರೆ, ಸೈನಿಕ ವರ್ಮಾ ಪಾಲ್ ಸಿಂಗ್ ಮತ್ತು ಸಿಆರ್ಪಿಎಫ್ನ ಯೋಧ ರಾಜೇಂದ್ರ ಸೈನ್ ಮತ್ತು ರವಿಂದ್ರ ಬಬ್ಬಾನ್ ಧಾನೆವಾಡೆ ಅವರಿಗೆ ಮರಣೋತ್ತರ ನಂತರ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಗಿದೆ.
ಸೇನೆ ಮತ್ತು ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವ 12 ಜನರಿಗೆ ಅಧಿಕಾರಿಗಳು ಹಾಗೂ ಸೇನಾಧಿಕಾರಿಗಳಿಗೆ ಶೌರ್ಯ ಚಕ್ರವನ್ನು ಕೂಡ ರಾಷ್ಟ್ರಪತಿ ಕೋವಿಂದ್ ಪ್ರದಾನ ಮಾಡಿದರು.
ಮೇಜರ್ ಅಮಿತ್ ಕುಮಾರ್ ಡಿಮ್ರಿ, ಅಭಯ್ ಶರ್ಮಾ, ಕ್ಯಾಪ್ಟನ್ ಅಭಿನವ್ ಕುಮಾರ್ ಚೌಧರಿ, ಲ್ಯಾನ್ಸ್ ನೈಕ್ ಅಯ್ಯುಬ್ ಅಲಿ, ಅಜಯ್ ಕುಮಾರ್, ಮಹೇಶ್ ಎಚ್.ಎನ್. ಸೇರಿದಂತೆ 12 ಜನರಿಗೆ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.