ಮುಂಬೈ, ಸೆ. 10 : ಬಾಲಿವುಡ್ ನಟ ರಿಷಿ ಕಪೂರ್ ಒಂದು ವರ್ಷದಿಂದ ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆದು ತಮ್ಮ ಪತ್ನಿ ನೀತು ಕಪೂರ್ ಜೊತೆಗೆ ಮನೆಗೆ ಮರಳಿದ್ದಾರೆ.
ತಾವು ಭಾರತಕ್ಕೆ ಆಗಮಿಸಿದೊಡನೆ ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿದ್ದು “BACK HOME 11 Months 11days! Thank you all!” ಎಂದು ಬರೆದುಕೊಂಡಿದ್ದಾರೆ.
ರಿಷಿ ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ವಿವರಿಸಿದ್ದರು. “ನನಗೆ ಮಜ್ಜೆಯ ಕ್ಯಾನ್ಸರ್ ಆಗಿದ್ದು, ಗುಣಪಡಿಸಿಕೊಳ್ಲಬೇಕಿತ್ತು. ಗಂಭೀರ ಏನೂ ಇರಲಿಲ್ಲ. ಆದರೆ ನೀವು ಹೆಚ್ಚು ಹೊತ್ತು ಕಾಯಲು ಸಾಧ್ಯವಿರಲಿಲ್ಲ. ‘’ ನಾನು ಇಲ್ಲಿ (ನ್ಯೂಯಾರ್ಕ್) ಗೆ ಬರಬೇಕಾಯಿತು. ಚಿಕಿತ್ಸೆ ಪಡೆದಿದ್ದು ದೇವರ ಆಶೀರ್ವಾದದಿಂದ ಯಶಸ್ವಿಯಾಗಿದೆ.”