10ಎಂ ಏರ್ ಪಿಸ್ತೂಲ್ ನಲ್ಲಿ ಚಿನ್ನ ಗೆದ್ದ ಅಭಿಷೇಕ್ ವರ್ಮಾ

10ಎಂ ಏರ್ ಪಿಸ್ತೂಲ್ ನಲ್ಲಿ ಚಿನ್ನ ಗೆದ್ದ ಅಭಿಷೇಕ್ ವರ್ಮಾ

ಬೀಜಿಂಗ್, . 27, ನ್ಯೂಸ್ ಎಕ್ಸ್ ಪ್ರೆಸ್: ಬೀಜಿಂಗ್ ನಲ್ಲಿ ನಡೆಯುತ್ತಿರೋ ಐಎಸ್ಎಸ್ಎಫ್  ವಿಶ್ವ ಕಪ್ ನಲ್ಲಿ ಭಾರತದ ಶೂಟರ್ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. 10 ಎಂ ಏರ್ ಪಿಸ್ತೂಲ್ ನಲ್ಲಿ, 242.7 ಸ್ಕೋರ್ ಗಳಿಸುವ ಮೂಲಕ 29 ವರ್ಷದ ಅಭಿಷೇಕ್ ಜಯಶಾಲಿಯಾಗಿದ್ದಾರೆ. ಇನ್ನು ರಷ್ಯಾದ ಆರ್ಟಮ್ ಚೆರ್ನೋಸೋವ್ ಹಾಗೂ ಕೊರಿಯಾದ ಸೆಂಗ್ವೂ ಹಾನ್ ಬೆಳ್ಳಿ ಹಾಗು ಕಂಚಿನ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ.

ಅಭಿಷೇಕ್ ತಮ್ಮ ಈ ಗೆಲುವಿನ ಮೂಲಕ 2020 ಟೋಕ್ಯೋ ಒಲಿಂಪಿಕ್ ನಲ್ಲಿ ಭಾರತಕ್ಕೆ ಮತ್ತೊಂದು ಕೋಟಾ ಪಡೆದುಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos