100 ದಿನದಲ್ಲಿ ಬಿಜೆಪಿ ಸಾಧನೆ

100 ದಿನದಲ್ಲಿ ಬಿಜೆಪಿ ಸಾಧನೆ

ನವದೆಹಲಿ, ಆ. 3 : ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಸಾಧನೆಗಳನ್ನು ದೊಡ್ಡ ರೀತಿಯಲ್ಲಿ ಜನರ ಮುಂದೆ ತೋರಿಸಿಕೊಳ್ಳಲು ಮುಂದಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370, ತ್ರಿವಳಿ ತಲಾಖ್ ಮಸೂದೆ ಅನುಮೋದನೆ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಕೆಲವು ನರೇಂದ್ರ ಮೋದಿ -2 ಸರ್ಕಾರದ 100 ದಿನಗಳ ಕೆಲವು ಸಾಧನೆಗಳಾಗಿವೆ. ಸಾಧನೆಗಳ ಪಟ್ಟಿಗಳನ್ನು ಹೊತ್ತ ಹೊತ್ತಿಗೆಯನ್ನು ಸರ್ಕಾರ ಬಿಡುಗಡೆ ಮಾಡಲಿದೆ.
100 ದಿನಗಳನ್ನು ಕೇಂದ್ರ ಸರ್ಕಾರ ಪೂರೈಸುವ ದಿನ ಪ್ರಧಾನಿ ಮೋದಿಯವರು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿರುತ್ತಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಗಗನನೌಕೆ ಇಳಿಯುವುದನ್ನು ಅವರು ಕಣ್ತುಂಬಿಕೊಳ್ಳಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos