ಬೆಂಗಳೂರು: ಬನಶಂಕರಿ ಬಳಿ ಇರುವ ಬಿಡಿಎ ಬಡಾವಣೆಯಲ್ಲಿ ಬೃಹತ್ ಶಾಪಿಂಗ್ ಮಾಲ್ ನಿರ್ಮಿಸಲು ಬಿಡಿಎ ಸಜ್ಜಾಗಿದೆ.
ಬನಶಂಕರಿಯ ಆರನೇ ಹಂತದಲ್ಲಿರುವ 35 ಗುಂಟೆ ಜಾಗದಲ್ಲಿ 350 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಲ್ಸಜ್ಜಗಲಿದೆ. 200ಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ದೊರೆಯಲಿದೆ. 2009ರಲ್ಲಿಯೇ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.
ಒಟ್ಟು ಆರು ಎಕರೆ ಜಾಗದಲ್ಲಿ ಬೃಹತ್ ವಾಣಿಜ್ಯ ಸಮುಚ್ಚಯ ನಿರ್ಮಾಣವಾಗಲಿದೆ. ನಗರದ ಹಲವೆಡೆ ಬಿಡಿಎ ಕಾಂಪ್ಲೆಕ್ಸ್‌ಗಳಿವೆ, ಹಳೆ ವಿನ್ಯಾಸದ ಈ ಕಟ್ಟಡಗಳು ಕಚೇರಿಗಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಮಲ್ಟಿ ಯೂಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತದೆ.
ಏಪ್ರಿಲ್ ಮೊದಲ ವಾರದಲ್ಲಿ ಅರ್ಹ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಕಂಪನಿಯು ಕಟ್ಟಡ ನಿರ್ಮಾಣ ಹಾಗೂ ಜಾಗದ ಅಭಿವೃದ್ಧಿ ಮಾಡಲಿದೆ. ಬಾಡಿಗೆ ಹಾಗೂ ಪಾರ್ಕಿಂಗ್ ನಲ್ಲಿ ಸ್ವಲ್ಪ ಮೊತ್ತವನ್ನು ಬಿಡಿಎ ಪಡೆಯಲಿದೆ ಎಂದು ತಿಳಿದು ಬಂದಿದೆ.