ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾಗಿದ್ದು, ಇಡೀ ಭಾರತವೇ ಶೋಕಾಚರಣೆಯಲ್ಲಿದೆ. ಇದೀಗ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಶನ್ (ಎಐಸಿಡಬ್ಲ್ಯುಎ) ಪಾಕಿಸ್ತಾನ ನಟರು, ನಟಿಯರು ಮತ್ತು ಕಲಾವಿದರಿಗೆ ಸಂಪೂರ್ಣ ನಿಷೇಧ ವಿಧಿಸಿದೆ.
ಯಾವುದೇ ಸಂಘಟನೆಯು ಪಾಕಿಸ್ತಾನಿ ಪ್ರಜೆಗಳೊಂದಿಗೆ ಕೆಲಸ ಮಾಡಲು ಬಯಸಿದ್ದಲ್ಲಿ ಅಂತಹ ಸಂಘಟನೆಯನ್ನು ನಿಷೇಧಿಸಲಾಗುವುದು ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ಎಐಸಿಡಬ್ಲ್ಯುಎ ತಿಳಿಸಿದೆ.