ಕಿರಿಯ ಜಡ್ಜ್ ಮಯಾಂಕ್

ಕಿರಿಯ ಜಡ್ಜ್ ಮಯಾಂಕ್

ಜೈಪುರ, ನ. 22 : ಜೈಪುರದ ಮಯಾಂಕ್ ದೇಶದ ಕಿರಿಯ ನ್ಯಾಯಮೂರ್ತಿ ಎಂದು ಖ್ಯಾತಿ ಪಡೆದಿದ್ದಾರೆ. ನ್ಯಾಯಾಂಗ ಸೇವಾ ಪರೀಕ್ಷೆ ಬರೆಯಲು 23 ವರ್ಷ ಆಗಿರಬೇಕು. ಆದರೆ ಈ ಬಾರಿ ರಾಜಸ್ಥಾನ ಹೈಕೋರ್ಟ್ ವಯೋಮಿತಿ 21ಕ್ಕೆ ಇಳಿಸಿದ ಕಾರಣ ನಾನು ಪರೀಕ್ಷೆ ಬರೆದೆ ಕಲಿಯಲು ಮತ್ತು ಕೆಲಸ ಮಾಡಲು ಇದು ನನಗೆ ಸಹಕಾರಿ. ನಾನು ಕಿರಿಯ ವಯಸ್ಸಿನಲ್ಲಿ ವೃತ್ತಿ ಆರಂಭಿಸುವ ಮೂಲಕ ನನಗೆ ಹೆಚ್ಚಿನ ಸಮಾಜ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ರಾಜಸ್ಥಾನ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಪಾಸಾಗಿದ್ದು, ದೇಶದ ಅತಿ ಕಿರಿಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮಾಜದಲ್ಲಿ ನ್ಯಾಯಮೂರ್ತಿಗಳಿಗಿರುವ ಪ್ರಾಧಾನ್ಯ ಮತ್ತು ಗೌರವವನ್ನು ನೋಡಿ ನನಗೆ ನ್ಯಾಯಾಂಗ ಸೇವೆ ಬಗ್ಗೆ ಆಸಕ್ತಿ ಹುಟ್ಟಿತು. ನಾನು ರಾಜಸ್ಥಾನ ಯುನಿವರ್ಸಿಟಿಯಲ್ಲಿ 5 ವರ್ಷದ ಎಲ್ಎಲ್ಬಿ ಕೋರ್ಸ್ಗೆ 2014ರಲ್ಲಿ ಸೇರಿದ್ದೆ.

ಫ್ರೆಶ್ ನ್ಯೂಸ್

Latest Posts

Featured Videos