ನಾಳೆ ಯಶ್ 19ನೇ ಸಿನಿಮಾ ಮಾಹಿತಿ ಹೊರ ಬರುತ್ತಾ…!

ನಾಳೆ ಯಶ್ 19ನೇ ಸಿನಿಮಾ ಮಾಹಿತಿ ಹೊರ ಬರುತ್ತಾ…!

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಒಂದು ಲುಕ್ ರಿಲೀಸ್ ಆಗಿದೆ. ಅದು ನಿಜವಾದ ಪೋಸ್ಟರ್ ಆಗಿದೆಯಾ? ಅಥವಾ ಇಲ್ಲಾವಾ? ಎಂಬ ಅನೇಕ ಪ್ರಶ್ನೆಗಳು ಮೂಡಿ ಬರುತ್ತಿದೆ. ಇದರ ಸುತ್ತಮುತ್ತಲು ಕೆಲವೊಂದು ಇಂಟ್ರೆಸ್ಟ್ರಿಂಗ್ ವಿಷಯಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿದೆ.  ಯಶ್ ನ 19ನೇ ಚಿತ್ರದ ಫಸ್ಟ್ ಲುಕ್ ಎಂದು ಬೇರೆಯಾರೋ ಹೇಳುತ್ತಿದ್ದಾರೆ . ಫೋಟೋವನ್ನು ನೋಡಿ ಕೆಲವು ಜಾಹೀರಾತಿನ ಫೋಟೋ ಇರಬಹುದು ಎಂದು ಅಂದುಕೊಳ್ಳಬಹುದು. ಯಶ್ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ತುಂಬಾ ಕುತೂಹಲವಿದೆ. ಅಭಿಮಾನಿಗಳ ನಿರೀಕ್ಷೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತೀಚಿನ ದಿನದಲ್ಲಿ ಕೆವಿಎನ್ ಪ್ರೊಡಕ್ಷನ್ ಹೌಸ್ ನಿಂದ ಒಂದು ಹೊಸ ಪೋಸ್ಟರ್ ರಿಲೀಸ್ ಆಗಿದೆ. ಆ ಪೋಸ್ಟರ್ ಸಹ ಯಶ್ ಮುಂದಿನ ಚಿತ್ರಕ್ಕೆ ಕನೆಕ್ಷನ್ ಮಾಡಲಾಗಿತ್ತು.  ನವಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಈ ಚಿತ್ರದ ಹೆಚ್ಚಿನ ಮಾಹಿತಿ ಹೊರಬರುವ  ಸಾಧ್ಯತೆ ಇದೆ ಎಂದು ಸುದ್ದಿಯಾಗುತ್ತಿದೆ .

ಫ್ರೆಶ್ ನ್ಯೂಸ್

Latest Posts

Featured Videos