ಸಿಎಂಗೆ ಇದನ್ನ ನಿಭಾಯಿಸೊಕೆ ಆಗುತ್ತಾ?

ಸಿಎಂಗೆ ಇದನ್ನ ನಿಭಾಯಿಸೊಕೆ ಆಗುತ್ತಾ?

ನವದೆಹಲಿ, ಆ. 8: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ, ಸದ್ಯಕ್ಕೆ ರಾಜ್ಯ ಸಚಿವ ಸಂಪುಟ ರಚನೆಗೆ ಅವಸರ ಮಾಡುವುದು ಬೇಡ, ಈಗ ನೀವು ಒಬ್ಬರೇ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿ ಮುಂದಿನ ವಾರ ಈ ಕುರಿತು ಚರ್ಚೆ ನಡೆಸೋಣ ಎಂದು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿ ಎರಡು ವಾರಗಳೇ ಕಳೆದಿವೆ. ಆದರೆ, ಇನ್ನೂ ರಾಜ್ಯ ಸಚಿವ ಸಂಪುಟ ರಚನೆ ಆಗಿಲ್ಲ. ಈ ನಡುವೆ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಜನರ ಸಮಸ್ಯೆಯನ್ನು ಆಲಿಸಲು ಮಂತ್ರಿಮಂಡಲವೇ ಇಲ್ಲ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಟೀಕಿಸುತ್ತಿರುವ ಬೆನ್ನಿಗೆ ರಾಜ್ಯ ಸಚಿವ ಸಂಪುಟ ರಚನೆ ಇನ್ನೂ ಒಂದು ವಾರಕ್ಕೆ ಮುಂದೂಡಲಾಗಿದೆ ಎಂಬ ಸುದ್ದಿಗಳು ಬಿಜೆಪಿ ಮೂಲಗಳಿಂದಲೇ ಹೊರಬೀಳುತ್ತಿದ್ದು ವಿರೋಧ ಪಕ್ಷಗಳಿಂದ ಮತ್ತಷ್ಟು ಟೀಕೆಗೆ ಒಳಗಾಗುವ ಸಾಧ್ಯತೆ ಇದೆ.

ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದೆ ದೊಡ್ಡ ಕಗ್ಗಂಟಾಗಿ ಕಾಡುತ್ತಿರುವ ವಿಚಾರ ಎಂದರೆ ಸಚಿವ ಸಂಪುಟ ರಚನೆ. ಸಂಪುಟ ರಚನೆಗೆ ಆಗುತ್ತಿರುವ ವಿಲಂಬವನ್ನು ಈಗಾಗಲೇ ವಿರೋಧ ಪಕ್ಷಗಳು ಸಾಕಷ್ಟು ಬಾರಿ ಟೀಕಿಸಿವೆ. ಹೀಗಾಗಿ ಸಂಪುಟ ರಚನೆ ಕುರಿತು ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಲು ಯಡಿಯೂರಪ್ಪ ಎರಡು ದಿನಗಳ ಹಿಂದೆಯೇ ದೆಹಲಿಗೆ ತೆರಳಿದ್ದರು. ಆದರೆ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಎಸ್ವೈ ಅವರನ್ನು ಭೇಟಿಯಾಗಿಲ್ಲ ಎಂದು ತಿಳಿದುಬಂದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos