ವಿಶ್ವಕಪ್: ಇಂದು ಇಂಗ್ಲೆಂಡ್ – ದಕ್ಷಿಣ ಆಫ್ರಿಕಾ ಪೈಪೋಟಿ

ವಿಶ್ವಕಪ್: ಇಂದು ಇಂಗ್ಲೆಂಡ್ – ದಕ್ಷಿಣ ಆಫ್ರಿಕಾ ಪೈಪೋಟಿ

ಲಂಡನ್, ಮೇ. 30, ನ್ಯೂಸ್ ಎಕ್ಸ್ ಪ್ರೆಸ್: ಇಂದು ವಿಶ್ವಕಪ್ ಏಕದಿನ ಕ್ರಿಕೆಟ್ ಕೂಟಕ್ಕೆ ಇಂಗ್ಲೆಂಡ್ ನಲ್ಲಿ ವರ್ಣರಂಜಿತ ಚಾಲನೆ ದೊರೆಯಲಿದೆ.

‘ಕೆನ್ನಿಂಗ್ಟನ್ ಓವೆಲ್’ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಬಲಾಡ್ಯ ಎನ್ನುವುದನ್ನು ಈಗಾಗಲೇ ಸಾರಿದೆ. ದಕ್ಷಿಣ ಆಫ್ರಿಕಾ ಕೂಡ ಅಷ್ಟೇ ಪ್ರಬಲ ತಂಡವಾಗಿದೆ. ಒಟ್ಟಿನಲ್ಲಿ 46 ದಿನಗಳ ಒಟ್ಟಾರೆ ವಿಶ್ವ ಕ್ರಿಕೆಟ್ ಜಾತ್ರೆಯಲ್ಲಿ ಹತ್ತು ಹಲವಾರು ರೋಚಕ ಸನ್ನಿವೇಶಗಳು ಕಾಣುವುದಂತೂ ಖಚಿತ.

ವಿಶ್ವಕಪ್ ನಲ್ಲಿ ಈ ಸಲ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕಪಿಲ್ ದೇವ್ (1983), ಎಂ.ಎಸ್. ಧೋನಿ (2011) ಬಳಿಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಕಪ್ ಗೆದ್ದು ಭಾರತಕ್ಕೆ ಮರಳುವ ನಿರೀಕ್ಷೆ ಮೂಡಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos