ವಿಶ್ವ ದರ್ಜೆಯ ಫಿಲ್ಮ್ ಸಿಟಿ

ವಿಶ್ವ ದರ್ಜೆಯ ಫಿಲ್ಮ್ ಸಿಟಿ

ಬೆಂಗಳೂರು. ಜ. 9 : ರಾಜ್ಯದಲ್ಲಿ ಚಿತ್ರ ನಗರಿ (ಫಿಲ್ಮ್ ಸಿಟಿ) ನಿರ್ಮಿಸುವ ದಶಕಗಳ ಕನಸಿಗೆ ಮರುಚಾಲನೆ ದೊರೆತಿದೆ. ಚಿತ್ರ ನಿರ್ಮಾಣ ಸೌಲಭ್ಯ, ಆ್ಯನಿಮೇಷನ್ ಕೇಂದ್ರವನ್ನೂ ಒಳಗೊಂಡು ಪ್ರವಾಸಿ ಆಕರ್ಷಣೆಯಿರುವ ವಿಶ್ವ ದರ್ಜೆಯ ಫಿಲ್ಮ್ ಸಿಟಿಯನ್ನು ಬೆಂಗಳೂರು ನಗರದ ಹೊರವಲಯದಲ್ಲಿ ನಿರ್ಮಿಸಲು ಸರಕಾರ ನಿರ್ಧರಿಸಿದೆ. ಮೊದಲಿಗೆ ಹೆಸರಘಟ್ಟ, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಮೈಸೂರು, ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ರಾಮನಗರ ಹಾಗೂ ನಂತರ ಕನಕಪುರ ರಸ್ತೆಯ ರೋರಿಚ್ ಎಸ್ಟೇಟ್ನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವ ಘೋಷಣೆ ಮಾಡಲಾಗಿತ್ತು. ಇದೀಗ, ಬೆಂಗಳೂರು ನಗರದ ಹೊರವಲಯದ ಸೂಕ್ತ ಜಾಗದಲ್ಲಿ ಚಿತ್ರ ನಗರಿ ನಿರ್ಮಿಸುವ ತೀರ್ಮಾನಕ್ಕೆ ಸರಕಾರ ಬಂದಿದೆ.

ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ಡಿಸಿಎಂ ಡಾ.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸಭೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ”ಬೆಂಗಳೂರು ಹೊರವಲಯದಲ್ಲಿ ಫಿಲ್ಮ್ ಸಿಟಿಯನ್ನು ನಿರ್ಮಿಸುವುದು ನಿಶ್ಚಿತ. ಸಿಎಂ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಸ್ಥಳ ನಿಗದಿಪಡಿಸಲಾಗುವುದು” ಎಂದು ತಿಳಿಸಿದ

ಫ್ರೆಶ್ ನ್ಯೂಸ್

Latest Posts

Featured Videos