ಮಹಿಳಾ ಸಬಲತೆಗೆ ಕೌಶಲ, ಶಿಕ್ಷಣ ಅವಶ್ಯ

ಮಹಿಳಾ ಸಬಲತೆಗೆ ಕೌಶಲ, ಶಿಕ್ಷಣ ಅವಶ್ಯ

ಟಿ.ದಾಸರಹಳ್ಳಿ: ಸಮಾಜದಲ್ಲಿ ಮಹಿಳೆಯರು ಸಬಲೀಕರಣ ಹೊಂದಲು ಕೌಶಲ ಮತ್ತು ಶಿಕ್ಷಣ ಎರಡು ಅವಿಭಾಜ್ಯ ಅಂಗ, ಇದೇ ಹಾದಿಯಲ್ಲಿ ಜೆ.ಎಸ್.ಎಸ್. ತರಭೇತಿ ಸಂಸ್ಥೆ ಕೂಢ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಭಾಗ್ಯಮ್ಮ ನುಡಿದರು.
ದಾಸರಹಳ್ಳಿ ಸಮೀಪದ ಚಿಕ್ಕಬಾಣಾವರದ ಸಂತೇ ಬೀದಿಯಲ್ಲಿರುವ ಜೆ.ಎಸ್.ಎಸ್. ಸ್ತ್ರೀ ಶಕ್ತಿ ಭವನದಲ್ಲಿ, ಮಹಿಳೆಯರ ಕೌಶಲ್ಯ ಅಭಿವೃದ್ಧಿ ಭಾಗವಾಗಿ ಹೊಲಿಗೆ ಯಂತ್ರಗಳ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಸಲುವಾಗಿ, ಎನ್.ಜಿ.ಓ ಭಾಗವಾಗಿ ಜನ ಶಿಕ್ಷಣ ಸಂಘ ಕಟ್ಟಿಕೊಂಡು, ಮಹಿಳೆಯರ ಕೌಶಲ್ಯ ಅಭಿವೃದ್ಧಿ ಗೆ ದಾಸರಹಳ್ಳಿ ಮಾಜಿ ಶಾಸಕ ಎಸ್. ಮುನಿರಾಜು ಅವರ ಸಹಕಾರದಿಂದ ಹೊಲಿಗೆ ಯಂತ್ರಗಳನ್ನು ಪಡೆದು ಕಾರ್ಯಗಾರ ತರಭೇತಿ ನಡೆಸಿದ್ದೇವೆ, ಈ ತರಭೇತಿ ಉಚಿತವಾಗಿದ್ದು, ಟೈಲರಿಂಗ್, ಎಂಬ್ರಾಯಡರಿ, ಬ್ಯಾಗ್ ತಯಾರಿಕೆ ಮಾಡುತ್ತಿದ್ದೇವೆ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮತ್ತು ಮಾಜಿ ಅಧ್ಯಕ್ಷರಾದ ಎಂ.ಮರಿಸ್ವಾಮಿ ಸಹ ನಮ್ಮ ಮಹಿಳಾ ಸಂಘಕ್ಕೆ ಹಲವಾರು ಸೌಲಭ್ಯ ನೀಡಿದ್ದಾರೆ, ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ, ಸ್ಥಳಿಯ ಚಿಕ್ಕಬಾಣಾವರ ಪಂಚಾಯತಿ ಗ್ರಾಮ ಪಂಚಾಯತಿ ಸದಸ್ಯರು ಮತ್ತು ತಾಲೂಕು ಪಂಚಾಯತಿ ಸದಸ್ಯರ ಸಹಕಾರ ಹೆಚ್ಚಿದೆ ಎಂದರು.
ಜೆ.ಎಸ್.ಎಸ್.ಸಂಸ್ಥೆಯ ಮುಖ್ಯಸ್ಥೆ ಸೌಭಾಗ್ಯಮ್ಮ, ಸಂಸ್ಥೆ ಯ ಮುಖ್ಯಸ್ಥೆ ಭಾಗ್ಯಮ್ಮ, ಮುಂತಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos