ನ್ಯಾಯದ ಪರ ನಾಯಕಿ ಪ್ರಿಯಾಂಕಾ ಗಾಂಧಿ

ನ್ಯಾಯದ ಪರ ನಾಯಕಿ ಪ್ರಿಯಾಂಕಾ ಗಾಂಧಿ

ನವದೆಹಲಿ: ಕಾನ್ಪುರದ ಸರ್ಕಾರಿ ಅನಾಥಾಶ್ರಮದಲ್ಲಿ ಇಬ್ಬರು ಹೆಣ್ಣು ಮಕ್ಕಳು ಗರ್ಭಿಣಿಯಾಗಿರುವುದನ್ನು ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಉತ್ತರಪ್ರದೇಶ ಸರ್ಕಾರ ನೋಟಿಸ್ ಜಾರಿ ಮಾಡಿದೆ.

ಇದಕ್ಕೆ ತಕ್ಕ ಉತ್ತರ ನೀಡಿರುವ ಪ್ರಿಯಾಂಕಾ, ಸರ್ಕಾರ ಏನಾದರೂ ಕ್ರಮ ಕೈಗೊಳ್ಳಲಿ. ನಾನು ಸತ್ಯದ ಪರ ನಿಲ್ಲುತ್ತೇನೆ. ನಾನು ಇಂದಿರಾ ಗಾಂಧಿಯ ಮೊಮ್ಮಗಳು. ವಿರೋಧ ಪಕ್ಷದ ಕೆಲವು ಅಘೋಷಿತ ನಾಯಕರಂತೆ ಅಲ್ಲ ಎಂದು ಹೇಳಿದ್ದಾರೆ.

ನಾನು ಪ್ರಜಾ ಸೇವಕಿ. ನನ್ನ ಸೇವೆ ಉತ್ತರ ಪ್ರದೇಶದ ಜನರಿಗೆ ಸೀಮಿತ. ನಾನು ಮಾಡುವ ಸೇವೆ ಸತ್ಯ, ನ್ಯಾಯದ ಪರ ಇರುತ್ತದೆಯೇ ಹೊರತು, ಸರ್ಕಾರದ ಪೂರ್ವಗ್ರಹ ಪೀಡಿತ ನೀತಿ -ನಿಯಮಾನುಸಾರ ಇರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಕಾನ್ಪುರದ ಸರ್ಕಾರಿ ಅನಾಥಾಶ್ರಮದಲ್ಲಿ ಇಬ್ಬರು ಹೆಣ್ಣು ಮಕ್ಕಳು ಗರ್ಭಿಣಿಯಾಗಿರುವುದನ್ನು ಖಂಡಿಸಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos