ಜಮ್ಮು-ಕಾಶ್ಮೀರ, ಹರಿಯಾಣ; ಯಾರಿಗೆ ಒಲಿದು ಬರಲಿದೆ ಅಧಿಕಾರ?

ಜಮ್ಮು-ಕಾಶ್ಮೀರ, ಹರಿಯಾಣ; ಯಾರಿಗೆ ಒಲಿದು ಬರಲಿದೆ ಅಧಿಕಾರ?

ನವದೆಹಲಿ: ಇಂದು ಎರಡು ರಾಜ್ಯಗಳ ಅಂದರೆ ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಹರಿಯಾಣದಲ್ಲಿ ಹಾವು ಏಣಿ ಆಟ ಪ್ರಾರಂಭವಾಗಿದ್ದು ಮೊದಲ ಹಂತದಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿದ್ದು ಇದೀಗ ಮತ್ತೆ ಬಿಜೆಪಿ ಬಹುಮತ ಪಡೆದಿದೆ ಎಂಬುದು ತಿಳಿದು ಬಂದಿದೆ.

ಹೌದು, ಇಂದು ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು ಈಗಾಗಲೇ ಎರಡು ಹಂತದ ಮತದಾನ ಮುಕ್ತಾಯಗೊಂಡಿದ್ದು ಮೊದಲನೇ ಹಂತದಲ್ಲಿ ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ ಎಂದು ತಿಳಿದುಬಂದಿತು. ಆದರೆ ಮೂರನೇ ಹಂತದಲ್ಲಿ ಇದೀಗ ಹರಿಯಾಣದಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿದ್ದು ಬಿಜೆಪಿಗೆ ಬಹುಮತ ಸಿಕ್ಕಿದೆ ಎಂಬುದು ತಿಳಿದು ಬಂದಿದೆ

ಹೌದು, ಭಾರೀ ಕುತೂಹಲ ಮೂಡಿಸಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆಯ ಚುನಾವಣಾ ಮತ ಎಣಿಕೆ ಇಂದು (ಮಂಗಳವಾರ ಅ.08) ನಡೆಯುತ್ತಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಕುರಿತು ಸ್ಪಷ್ಟ ಚಿತ್ರಣಗಳು ಲಭ್ಯವಾಗುವ ನಿರೀಕ್ಷೆಗಳಿವೆ.

ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್’ಗೆ ಸ್ಪಷ್ಟ ಬಹುಮತ ಮತ್ತು ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟಕ್ಕೆ ಮುನ್ನಡೆ ಇಲ್ಲವೇ ಸರಳ ಬಹುಮತದ ಸುಳಿವು ನೀಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos