ಗಂಡನ ಜೊತೆ ಮಾತಾಡ್ತಿದ್ದಾಗಲೇ ಪತ್ನಿ ಸಾವು

ಗಂಡನ ಜೊತೆ ಮಾತಾಡ್ತಿದ್ದಾಗಲೇ ಪತ್ನಿ ಸಾವು

ಚೆನ್ನೈ, ಡಿ. 22 : ಮಹಿಳೆಯೊಬ್ಬಳು ತನ್ನ ಪತಿಯ ಜೊತೆ ಫೋನಿನಲ್ಲಿ ಮಾತಾಡುತ್ತಿದ್ದಾಗಲೇ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ತಮಿಳುನಾಡಿನ ಪುದುಚೇರಿಯ ಪೆರಂಬೂರಿನಲ್ಲಿ ನಡೆದಿದೆ. ಸೆಲ್ವಿ (22) ಮೃತ ಮಹಿಳೆ. ಈ ಘಟನೆ ಡಿಸೆಂಬರ್ 17 ರಂದು ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸೆಲ್ವಿ ಮೃತಪಟ್ಟಿದ್ದಾಳೆ.

ಮಹಿಳೆ ಕಟ್ಟಡದಿಂದ ಬೀಳುವ ದೃಶ್ಯ ಆ ಪ್ರದೇಶದ ಸಿಸಿಟಿವಿಯಲ್ಲಿ ಸೆರೆಯಾಗಿದೆ.2017ರಲ್ಲಿ ಸೆಲ್ವಿ ಪೆರಂಬೂರಿನ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಈಕೆಗೆ 9 ತಿಂಗಳು ಮಗುವಿದೆ. ಡಿಸೆಂಬರ್ 17ರಂದು ತನ್ನ ತವರು ಮನೆಗೆ ಬಂದಿದ್ದಳು. ಅಂದು ರಾತ್ರಿ ಊಟ ಮಾಡಿ ಬಿಲ್ಡಿಂಗ್ನ 2ನೇ ಅಂತಸ್ತಿನ ಮೇಲೆ ನಿಂತುಕೊಂಡು ಪತಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಕಟ್ಟಡದಿಂದ ಸೆಲ್ವಿ ಕೆಳಗೆ ಬಿದ್ದಿದ್ದಾಳೆ. ಆಕೆಯ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos