‘ಕಲ್ಯಾಣ ಕರ್ನಾಟಕೋತ್ಸವ ಆಚರಣೆ’

‘ಕಲ್ಯಾಣ ಕರ್ನಾಟಕೋತ್ಸವ ಆಚರಣೆ’

ಶಹಾಪುರ: ಎರಡು ವರ್ಷಗಳ ಹಿಂದೆ ಈ ಭೂ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡುವ ಮೂಲಕ ಇಲ್ಲಿ ನಡೆಯುವ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ್ ಚಿಲ್ಲಾಳ ಹೇಳಿದರು.

ನಗರದಲ್ಲಿನ ನಗರ ಯೋಜನಾ ಪ್ರಾಧಿಕಾರ ಕಛೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ನಿಮಿತ್ಯ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು ಸೆ 17 ರಂದು ಆಚರಿಸುವ ಈ ದಿನವನ್ನು ಕಲ್ಯಾಣದವರಿಗೆ ಎಂದೂ ಮರೆಯದ ದಿನ. ಬ್ರಿಟಿಷರ ಕಪಿಮುಷ್ಠಿ ಯಿಂದ ಮುಕ್ತಿ ಕಂಡ ನಮ್ಮ ದೇಶಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕರೆ, ನಿಜಮರ ದುರಾಡಳಿತ ಹಾಗೂ ಕ್ರೂರ ರಜಾಕಾರರ ಹಾವಳಿಯಿಂದ ತತ್ತರಿಸಿದ್ದ ಅಂದಿನ ಹೈದಾರಬಾದ್ ಕರ್ನಾಟಕದ ಇಂದಿನ ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರ, ಕೊಪ್ಪಳ ಭಾಗಗಳಲ್ಲಿ ಮಾತ್ರ ಸ್ವಾತಂತ್ರ್ಯ ಸಿಕ್ಕಿದ್ದು ಒಂದು ವರ್ಷದ ನಂತರ. ಸಾವಿರಾರು ಜನರ ತ್ಯಾಗ ಬಲಿದಾನಗಳು ಇದಕ್ಕೆ ಸಾಕ್ಷಿಯಾದವು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು, ನಂದಣ್ಣ ಮೂಡಬೂಳ, ಶರಣಪ್ಪ ಮುಂಡಾಸ್, ರಾಜು ಪಂಚಭಾವಿ, ಸಿದ್ದಯ್ಯಸ್ವಾಮಿ ಹಿರೇಮಠ, ಮುರಳೀಧರ ಕುಲಕರ್ಣಿ, ಗಿರಿಜಮ್ಮ, ನಾಗಮ್ಮ ಸಿದ್ದಯ್ಯ, ಸೋಪಣ್ಣ ಸಗರ, ಬೀಮರಾಯ ಕೇಲಕರ್, ಕಛೇರಿ ಸಿಬ್ಬಂದಿಗಳಾದ ಮಹ್ಮದ್ ಝಾಫರ್ ಹುಸೇನ್ ದಾದಿಲ್ಲಾ, ನಿಂಗಪ್ಪ ಪೂಜಾರಿ, ಅಕ್ಷಯ ಕುಮಾರ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos