‘ಸಿಹಿ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ’

‘ಸಿಹಿ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ’

ಚಿಂಚೋಳಿ: ಪಟ್ಟಣದ ಚಂದಾಪುರದ ಲಿಟಲ್ ಫ್ಲವರ್ ಶಾಲೆ ರಾಜ್ಯ ಸರ್ಕಾರದ ಆದೇಶದಂತೆ 6ರಿಂದ 8ನೇ ತರಗತಿ ಶಾಲೆ ಪ್ರಾರಂಭವಾಗಿದರಿಂದ ವಿದ್ಯಾರ್ಥಿಗಳಿಗೆ ಹೂ ಮತ್ತು ಸಿಹಿ ಕೊಡುವುದರ ಮೂಲಕ ಸೋಮವಾರ ಶಾಲೆಗೆ ಬರಮಾಡಿಕೊಳ್ಳಲಾಯಿತು.

ಈ ವೇಳೆ ಫಾದರ್ ಜಾರ್ಜ್ ಲೋಬೊ ಮಾತನಾಡಿ ಶಾಲೆ ಪುನಾರಂಭ ಆಗಿದ್ದು ತುಂಬಾ ಸಂತೋಷದ ವಿಷಯ, ಮಕ್ಕಳು ತಪ್ಪದೇ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಸಂಗ ಮಾಡಬೇಕು, ಯಾವ ಮಕ್ಕಳಿಗೆ ಕೆಮ್ಮು, ಶೀತ, ಜ್ವರ ಇದ್ದರೆ ಗುಣಮುಖರಾಗಿ ಶಾಲೆಗೆ ಬರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಚ್.ಎಂ. ಸಿಸ್ಟರ್ ಅರಪೂತಾ, ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos