ವಾಹನಗಳಿಗೆ ಆಯುಧ ಪೂಜೆ

ವಾಹನಗಳಿಗೆ ಆಯುಧ ಪೂಜೆ

ಹನೂರು: ಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಮಲೈ ಮಹದೇಶ್ವರ ಕ್ಷೇತ್ರದಲ್ಲಿ ದೇವಾಸ್ತಾನದ ವಾಹನಗಳಿಗೆ ಆಯುಧ ಪೂಜೆಯನ್ನು ನೆರವೇರಿಸಲಾಯಿತು.
ನಂತರ ಮಾತನಾಡಿದ ಶ್ರೀ ಮಲೈ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಶ್ರೀ ಜಯವಿಭವಸ್ವಾಮಿ ಮಾತನಾಡಿ ಈ ವರ್ಷವು ಸರಳವಾಗಿ ಆಚರಿಸಲಾಯಿತು ಪೂಜೆ ಮಾಡಿದ ವಾಹನ ಮತ್ತು ಆಯುಧಗಳಿಗಿವೆ ಎಲ್ಲ ಲಘು ವಾಹನಗಳು ಹಾಗೂ ಲೊಹಗಳು ಪ್ರಾಧಿಕಾರದ ಸಾರಿಗೆ ಬಸ್ಸುಗಳು, ಪ್ರಾಧಿಕಾರದ ವಿದ್ಯುತ್ ಶಕ್ತಿ ಹಾಗೂ ಕಾವೇರಿ ನೀರು ಸರಬರಾಜು ವಿಭಾಗಗದ ಎಲ್ಲ ಯಂತ್ರೊಪಕರಣಗಳು ಆಯುಧ ಪೂಜೆಯು ಸಾಲೂರು ಬೃಹನ್ಮಠದ ಪೀಠಾಧಿಕಾರಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಹಸ್ತದಿಂದ ನೆರವೇರಿತು.
ಈ ಬಾರಿ ಕೋವಿಡ್ ಹೋಗಲಾಡಿಸಲು ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿರುವ ಪ್ರಯುಕ್ತ ದೇವಾಲಯವನ್ನು ಸಾರ್ವಜನಿಕರಿಗೆ / ಭಕ್ತರಿಗೆ ಪ್ರವೇಶ ನಿಷೇಧ ಇರುವುದರಿಂದ ಭಕ್ತರಿಲ್ಲದೇ ಪೂಜೆಗಳು ಶಾಸ್ತ್ರೋಕ್ತವಾಗಿ ನಡೆದವು.
ಪ್ರತಿವರ್ಷ ಭಕ್ತರಿಂದ ಭಕ್ತಿಪರಾಕಾಷ್ಠೆಯಿಂದ ತುಳುಕಾಡುತ್ತಿದ್ದ ದಸರಾ ಈ ವರ್ಷ ಭಕ್ತರಿಲ್ಲದೇ ಶಾಂತ ವಾತಾವರಣದಲ್ಲಿ ನಾವೇ ಆಚರಿಸಿರುವುದು ಈ ದೇವಾಲಯದ ಇತಿಹಾಸದಲ್ಲೇ ಮೊದಲು ಎಂದು ಇಲ್ಲಿನ ಹಿರಿಯರು ತಿಳಿಸಿದರು ಎನ್ನಲಾಗುತ್ತಿದೆ
ಹಾಗಾಗಿ ಎಲ್ಲಾ ಪೂಜೆಗಳೂ ಶಾಸ್ತ್ರೋಕ್ತವಾಗಿ ನಡೆದರೂ, ಮ.ಬೆಟ್ಟದ ರಸ್ತೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಸದ್ದುಗದ್ದಲವಿಲ್ಲದೆ ಬಿಕೋ ಎನ್ನುವಂತಿತ್ತು ಎಂದರು. ಇದೇ ಸಮಯದಲ್ಲಿ ದೇವಾಲಯದ ಸಿಬ್ಬಂದಿ ವರ್ಗ ಮತ್ತು ಭಕ್ತರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos