ವಾರ್ನರ್ ದಾಖಲೆ ಮುರಿಯಲಿದ್ದಾರೆ :ಲಾರಾ

ವಾರ್ನರ್ ದಾಖಲೆ ಮುರಿಯಲಿದ್ದಾರೆ :ಲಾರಾ

ಅಡಿಲೇಡ್, ಡಿ. 2 : ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮಾನ್ ಡೇವಿಡ್ ವಾರ್ನರ್ ತ್ರಿ ಶತಕ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ಬ್ರೆಯನ್ ಲಾರಾ ಅವರ ದಾಖಲೆ 400ರನ್ನ ಗಳ ದಾಖಲೆ ಮುರಿಯಲು ಇನ್ನೂ 65 ರನ್ನುಗಳು ಬಾಕಿ ಇರುವಂತೆ ಡಿಕ್ಲೇರ್ ಘೋಷಿಸಿರುವುದು ಘಟಾನುಟಿ ನಾಯಕರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ತ್ರಿ ಶತಕ ಪೂರೈಸಿ ಬ್ರಿಯಾನ್ ಲಾರಾ ಅವರ 400 ರನ್ ದಾಖಲೆ ಮುರಿಯುವತ್ತ ಸಾಗುತ್ತಿದ್ದ ವೇಳೆ ಡಿಕ್ಲೇರ್ ಘೋಷಿಸಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ನಿರ್ಧಾರಕ್ಕೆ ಸ್ವತಃ ವೆಸ್ಟ್ ಇಂಡೀಸ್ ದಂತಕತೆಯೇ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಿಯಾನ್ ಲಾರಾ ಅವರು ವಾಣಿಜ್ಯ ಕಾರ್ಯಕ್ರಮ ನಿಮಿತ್ತ ಅಡಿಲೇಡ್ಗೆ ಆಗಮಿಸಿದ್ದರು. ಇದೇ ದಿನ ಡೇವಿಡ್ ವಾರ್ನರ್ ವೃತ್ತಿ ಜೀವನದ ತ್ರಿ ಶತಕ ಸಿಡಿಸಿದ್ದರು. 335 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೆ, ನಾಯಕ ಟಿಮ್ 583/3 ಕ್ಕೆ ಪ್ರಥಮ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಲಾರಾ, ” ವಾರ್ನರ್ ಅವರ ಇನಿಂಗ್ಸ್ ಅದ್ಭುತವಾಗಿತ್ತು. ಮಹತ್ವದ ದಾಖಲೆಯ ಜತೆಗೆ ಆಸ್ಟ್ರೇಲಿಯಾದ ಹೊನಲು-ಬೆಳಕಿನ ಟೆಸ್ಟ್ ಪಂದ್ಯದ ಗೆಲುವನ್ನು ನೋಡಬಹುದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos