ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

ಅರೇಹಳ್ಳಿ, ಮಾ. 04: ಅರೇಹಳ್ಳಿ ಹೋಬಳಿಯ ಹಳೆ ಸಂತೇಮಳ ಮತ್ತು ಲಿಂಗಾಪುರ ಗ್ರಾಮಕ್ಕೆ ಕಳೆದ 10 ವರ್ಷಗಳಿಂದ ಯಾವುದೆ ಅನುದಾನ ಬಿಡುಗಡೆಯಾಗಿಲ್ಲ ಹಾಗು ಕಂದಾಯ ಇಲಾಖೆಯ ಭೂದಾಖಲೆಗಳಲ್ಲಿ ಗ್ರಾಮದ ಹೆಸರು ಇಲ್ಲದಿರುವುದನ್ನು ಖಂಡಿಸಿ ಗ್ರಾಮಸ್ಥರು ಮಂಗಳವಾರ ರಾತ್ರಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಬಹಿಷ್ಕಾರ ಮಾಡಲು ತಿರ್ಮಾನಿಸಿ ಗ್ರಾಮದ ಮುಖ್ಯದ್ವಾರದ ಬಳಿ ಬ್ಯಾನರ್ ಕಟ್ಟಿ ಪ್ರತಿಭಟನೆ ನೆಡೆಸಿದರು

ವರದಿಗಾರರೊಂದಿಗೆ ಗ್ರಾಮಸ್ಥರಾದ ಅಣ್ಣುಪೂಜಾರಿ ಮಾತನಾಡಿ ನಮ್ಮ ಗ್ರಾಮದಲ್ಲಿ ಸುಮಾರು 1250  ಕ್ಕೂ ಹೆಚ್ಚಿನ ಮತದಾರರಿದ್ದು ಸುಮಾರು 200 ರಿಂದ 250 ಕ್ಕೂ ಹೆಚ್ಚು ಕುಟುಂಬಕುಟುಂಬಗಳು ಕಳೆದ  80 ವರ್ಷಗಳಿಂದ ವಾಸಿಸುತ್ತಿದ್ದೆವೆ ಅದರೂ ಸಹ ನಮ್ಮ ಆಸ್ತಿ ಪಾಸ್ತಿಗಳಿಗೆ ಯಾವುದೆ ದಾಖಲಾತಿ ಇರುವುದಿಲ್ಲ ಇದ್ದರಿಂದ ಸರ್ಕಾರದಿಂದ ಬರುವ ಯಾವುದೆ ಅನುದಾನ ಬಿಡುಗಡೆಯಾಗಿಲ್ಲ ಮತ್ತು ನಮ್ಮ ಗ್ರಾಮದ ಯಾವೊಬ್ಬ ಬಡವರಿಗೂ ಯಾವುದೆ ವಸತಿಯೋಜನೆ ಆಡಿಯಲ್ಲಿ ಮನೆಗಳು ಬಿಡುಗಡೆಯಾಗಿಲ್ಲ ಅದ್ದರಿಂದ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಎಲ್ಲಾ ಗ್ರಾಮಸ್ಥರು ತೀರ್ಮಾನ ಮಾಡಲಾಗಿದೆ ಎಂದರು

ಗ್ರಾಮದ ಮುಖಂಡರಾದ ಹರೀಶ್ ಶೆಟ್ಟಿ ಮಾತನಾಡಿ, ಕಳೆದ ಬಾರಿ ವಿಧಾನಸಭೆ ಚುನಾವಣೆಯ ಸಮಯದಲ್ಲೂ ಸಹ ನಾವು ಚುನಾವಣೆ ಬಹಿಷ್ಕಾರ ಮಾಡುವ ತಿರ್ಮಾನ ಮಾಡಲಾಗಿತ್ತು ಆದರೆ ಬೇಲೂರು ತಾಲ್ಲೂಕು ತಹಶೀಲ್ದಾರ್ ರವರ ಮಧ್ಯಸ್ಥಿಕೆ ಮತ್ತು ಸಮಸ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹಾರ ಕೊಡಿಸುವ ವಿಶ್ವಾಸ ನೀಡಿದ್ದರು ಆದ್ದರಿಂದ ಬಹಿಷ್ಕಾರ ಹಿಂಪಡೆಯಲಾಗಿತ್ತು ಇದಾಗಿ ವರ್ಷಗಳೆ ಕಳೆದರು ಯಾವುದೇ ಪ್ರಯೋಜನವಿಲ್ಲ ಈಗ ಸಮಸ್ಯೆ ಬಗ್ಗೆ ಹರಿಯುವ ತನಕ ಹಿಂಜರಿಯುವ ಮಾತಿಲ್ಲ ಎಂದರು ಹಾಗೆ 400 ಮತದಾರರಿರುವ ವಾರ್ಡಿಗೂ ಇಬ್ಬರು ಸದಸ್ಯರಿದ್ದು, 1250  ಮತದಾರರಿರುವ ನಮ್ಮ ವಾರ್ಡಿಗೂ 2 ಜನ ಸದಸ್ಯರ ಆದೇಶ ವಾಪಸು ಪಡೆದ್ದು ಮೊದಲ್ಲಿದ್ದ ಮೂರು ಜನ ಸದಸ್ಯರ ಆಯ್ಕೆಯ ಆದೇಶ ಜಾರಿಮಾಡಿ ಇಲ್ಲಿನ ಮತದಾರರಿಗೆ ನ್ಯಾಯ ಒದಗಿಸಬೇಕು ಜೊತೆಗೆ ನಮ್ಮ ಗ್ರಾಮಕ್ಕೆ ಸರಿಯಾದ ದಾಖಲಾತಿ ಒದಗಿಸಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದರು. ಪ್ರತಿಭಟನೆಯಲ್ಲಿ ಹಳೆಸಂತೆಮಳ ಮತ್ತು ಲಿಂಗಾಪುರ ಗ್ರಾಮದ ನೂರಾರು ಗ್ರಾಮಸ್ಥರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos