ವಿವಾ ಪ್ರತಿಭಾ ಪ್ರದರ್ಶನ

ವಿವಾ ಪ್ರತಿಭಾ ಪ್ರದರ್ಶನ

ಮಹದೇವಪುರ, ಡಿ. 24: ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ವಿಬ್ಗೇರ್ ಶಾಲೆ ವಿವಿಧ ವೇದಿಕೆಗಳನ್ನು ಒದಗಿಸಲು ಶ್ರಮಿಸುತ್ತದೆ ಎಂದು ವಿಬ್ಗೇರ್ ಗ್ರೂಫ್ ಆಫ್ ಸ್ಕೂಲ್ ನ ಉಪಾದ್ಯಕ್ಷೆ ಕವಿತಾ ಸಹಾಯ್ ಕೆರಾವಾಲ್ಲಾ ಹೇಳಿದರು.

ಮಾರತಹಳ್ಳಿ ಬಳಿಯ ವಿಬ್ಗೇರ್ ಶಾಲೆಯಲ್ಲಿ  ಏರ್ಪಡಿಸಿದ್ದ ವಿವಾ ಪ್ರತಿಭಾ ಪ್ರದರ್ಶನ ಹಾಗೂ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಧ್ಯಾರ್ಥಿಗಳು ವಿಧ್ಯಾಭ್ಯಾಸದ ಕಡೆಗೆ ಗಮನ ಹರಿಸುವುದರ ಜೊತೆಗೆ ಕ್ರೀಡೆ ಹಾಗೂ ಸಂಗೀತ, ಡ್ಯಾನ್ಸ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹಾ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಈ ವಿವಾ ಉತ್ಸವವು ದೇಶಾದ್ಯಂತ ಇರುವ ವಿಬ್‌ ಗಯಾರ್ ಶಾಲೆಗಳ ವಿದ್ಯಾರ್ಥಿಗಳನ್ನು ಮಾತ್ರ ಒಟ್ಟುಗೂಡಿಸುವುದಿಲ್ಲ, ಬದಲಿಗೆ ಇತರ ಶಾಲೆಯ ಮಕ್ಕಳಿಗೂ ಸಹ ವೇದಿಕೆಯನ್ನು ಒದಗಿಸುತ್ತದೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ ಎಂದು ಹೇಳಿದರು.

ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಸಂಗೀತ, ನೃತ್ಯ ಮತ್ತು ವಿವಿಧ ರೀತಿಯ ಪ್ರತಿಭೆಗಳ ಪ್ರದರ್ಶನ ಕಾರ್ಯಕ್ರಮಗಳು ನಡೆದಿದ್ದು, ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಎಂದು ಹೇಳಿದರು. ಭಾರತದಾದ್ಯಂತ ವಿವಿಧ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ತಮ್ಮ ಅದ್ಭುತ ಭಾರತೀಯ ಶಾಸ್ತ್ರೀಯ, ಸಮಕಾಲೀನ, ಏಕವ್ಯಕ್ತಿ ಮತ್ತು ಗುಂಪು ನ್ನತ್ಯ ಪ್ರದರ್ಶನಗಳನ್ನು ಪ್ರದರ್ಶಿಸಿದರು.

ಈ ಕಾರ್ಯಕ್ರಮದಲ್ಲಿ ಚಿತ್ರ ನಟರು ಹರೀಶ್ ರಾಯ್, ವೈಷ್ಣವಿ ಮೆನನ್, ದೀಪಾಲಿ ಚಕ್ರವರ್ತಿ, ಮಧು ಗೋವಿಂದ ರಾಜನ್, ಸಭ್ಯ ಚಾಚಿ ಚಟರ್ಜಿ ಸೇರಿದಂತೆ ಹಲವಾರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos