ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ

ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ

ದೇವದುರ್ಗ: ರಾಜಾ ವೀರ ಮದಕರಿ ನಾಯಕ ರಾಜ್ಯಭಾರ ಮಾಡಿದ ಚಿತ್ರದುರ್ಗ ಕೋಟೆಯ ನಾಡಿನಲ್ಲಿ 1972 ರಲ್ಲಿ ಚಿತ್ರೀಕರಣಗೊಂಡು ಒಂದು ಜೀವಿ ಮತ್ತೊಂದು ನಿರ್ಜೀವಿ ಎರಡಕ್ಕೂ ಬೆಳವಣಿಗೆಯನ್ನು ತಂದು ಕೊಟ್ಟಂತಹ ನಾಗರಹಾವು ಚಿತ್ರದ ಮೂಲಕ ನಾಯಕ ನಟನಾಗಿ ಅಮೋಘ ಜನಸಾಮಾನ್ಯರ ನೆಚ್ಚಿನ ಪ್ರಖ್ಯಾತಿ ಪಡೆದ ಸಿನಿಮಾಗಳಲ್ಲಿ ಅಭಿನಯಿಸಿ ದೇಶವಿದೇಶಗಳಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ಉತ್ತಮ ಸ್ನೇಹ ಜೀವಿ ನಾಡು-ನುಡಿ ನೆಲ-ಜಲ ಕಲೆ-ಸಾಹಿತ್ಯಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದ ಏಕೈಕ ಮೇರು ನಟ ಹುಟ್ಟಿನಿಂದ ಸಂಪತ್ ಕುಮಾರ ನಾಗಿರುವ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಆದರ್ಶ ಗುಣದ ನೆನಪುಗಳು ಅಭಿಮಾನಿಗಳ ದಾರಿ ದೀಪವಾಗಿವೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ರಾಮಣ್ಣನಾಯಕ ಹೇಳಿದರು.

ಅವರಿಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಅಭಿಮಾನಿ ಬಳಗ ಆಯೋಜಿಸಿದ ಡಾ. ವಿಷ್ಣುವರ್ಧನ್ ಅವರ 71ನೆ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಹುಲಿಮನಿ, ಡಾ. ಶಿವಾನಂದ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಹಮ್ಮದ್, ಶೇಕ್ ಮುನ್ನಾಬೈ, ಅಯ್ಯಪ್ಪ ಕದರಪುರ, ಮಹಮ್ಮದ್ ರಪೀ, ಮೈನುದ್ದೀನ್, ನಾಗರಾಜ ಮಜ್ಜಿಗೆ, ಡಾ. ಅಹಮದ್, ಹಾಸ್ಯ ಕಲಾವಿದ ನಿರಂಜನ ಮಸರಕಲ್, ಶಿವಪ್ಪ ಕಂದಾಯ, ರಾಜು, ಮತ್ತಿತರರು ಇದ್ದರು,

ಫ್ರೆಶ್ ನ್ಯೂಸ್

Latest Posts

Featured Videos